ಮಂಗಳೂರು(ಮುಂಬೈ): ಜೆಕ್ ಗಣರಾಜ್ಯದ ಕ್ರಿಸ್ಟೈನಾ ಪಿಸ್ಕೋವಾ ಅವರು ಮಿಸ್ ವರ್ಲ್ಡ್ 2024 ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.
ಮುಂಬೈನ ಬಿಕೆಸಿಯಲ್ಲಿರುವ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಕಳೆದ ವರ್ಷದ ವಿಜೇತ ಪೋಲೆಂಡ್‌ನ ಮಿಸ್ ವರ್ಲ್ಡ್ 2022 ಕರೋಲಿನಾ ಬಿಲಾವ್ಸ್ಕಾ ತಮ್ಮ ಉತ್ತರಾಧಿಕಾರಿಗೆ ಈ ಕಿರೀಟವನ್ನು ಮುಡಿಸಿದರು. ಲೆಬನಾನ್‌ನ ಯಾಸ್ಮಿನಾ ಜೈಟೌನ್ ಸ್ಪರ್ಧೆಯ ಮೊದಲ ರನ್ನರ್‌ಅಪ್ ಎನಿಸಿಕೊಂಡರು. 71ನೇ ಆವೃತ್ತಿಯ ಮಿಸ್ ವರ್ಲ್ಡ್ ಫೈನಲ್ ಭಾರತದಲ್ಲಿ ಅದ್ದೂರಿಯಾಗಿ ನೆರವೇರಿದ್ದು, ವಿಶ್ವದ ಪ್ರಮುಖ ದೇಶಗಳ ಮಹಿಳೆಯರ ಸೌಂದರ್ಯ ಮತ್ತು ಸಾಮರ್ಥ್ಯವನ್ನು ಜಗತ್ತಿಗೆ ಅನಾವರಣಗೊಳಿಸಿದೆ.
ಭಾರತದಲ್ಲಿ ನಡೆದ 71ನೇ ಆವೃತ್ತಿಯ ವಿಶ್ವಸುಂದರಿ ಸ್ಪರ್ಧೆ ಸಾಕಷ್ಟು ಉತ್ಸಾಹ ಹಾಗೂ ನಿರೀಕ್ಷೆಯನ್ನು ಹುಟ್ಟುಹಾಕಿತ್ತು. ಭಾರತೀಯ ವಿನ್ಯಾಸಕಿ ಅರ್ಚನಾ ಕೊಚ್ಚರ್ ಅವರು ವಿಶೇಷ ರೇಷ್ಮೆ ಬಟ್ಟೆಯನ್ನು ಬಳಸಿ ವಿಶ್ವ ಸುಂದರಿ 2024 ಸ್ಪರ್ಧಿಗಳಿಗಾಗಿ ಎಲ್ಲಾ ಬಟ್ಟೆಗಳನ್ನು ವಿನ್ಯಾಸಗೊಳಿಸಿದ್ದು ವಿಶೇಷವಾಗಿತ್ತು. 71ನೇ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಬಾಲಿವುಡ್ ನಟರಾದ ಕೃತಿ ಸನೋನ್ ಮತ್ತು ಪೂಜಾ ಹೆಗ್ಡೆ ಅವರು 12 ಸದಸ್ಯರ ತೀರ್ಪುಗಾರರ ಸಮಿತಿಯಲ್ಲಿ ಸೇರಿದ್ದರು.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ
#KrystynaPyszkova from the Czech Republic wins the 71st #MissWorld Title 2024. #MissWorld2024 #Newsinside#MissWorld71st
pic.twitter.com/4dbyNmu2cl— imran ali (@imu07280300033) March 10, 2024