ಮಂಗಳೂರು/ಮಡಿಕೇರಿ: ಕೊಡಗಿನ ವಿರಾಜಪೇಟೆ ತಾಲೂಕಿನ ಅಬ್ಬೂರಿನ ಕಾಫಿ ತೋಟವೊಂದರಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕ ಮಹಿಳೆ ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ.
ಅಸ್ಸಾಂನ ಅಜಬಾನು(37) ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟ ಮಹಿಳೆಯಾಗಿದ್ದಾಳೆ. ಮಧ್ಯಾಹ್ನ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಒಂಟಿ ಕಾಡಾನೆಯೊಂದು ದಾಳಿ ನಡೆಸಿದೆ. ದಾಳಿಗೆ ಸಿಲುಕಿದ ಅಜಬಾನು ಅವರನ್ನು ಕೂಡಲೇ ಪಾಲಿಬೆಟ್ಟದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ. 2ಕಿ.ಮೀ ದೂರದಲ್ಲಿರುವ ನಾಗರಹೊಳೆ ಅರಣ್ಯದಿಂದ ಬರುತ್ತಿದ್ದ ಆನೆಯನ್ನು ನಿರಂತರವಾಗಿ ಕಾಡಿಗೆ ಓಡಿಸಲಾಗುತ್ತಿತ್ತು. ಆದರೆ, ಮತ್ತೆ ಮತ್ತೆ ಅದು ಕಾಫಿತೋಟಗಳಿಗೆ ವಾಪಸ್ ಬರುತ್ತಿತ್ತು. ಇದೇ ಆನೆ ದಾಳಿ ಮಾಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆಸ್ಪತ್ರೆ ಮುಂದೆ ಜಮಾಯಿಸಿದ ಸ್ಥಳೀಯರು ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.