ಏ.19 ರಿಂದ ಜೂ.1ರವರೆಗೆ ಏಳು ಹಂತದಲ್ಲಿ ಲೋಕಸಭಾ ಚುನಾವಣೆ-ಕರ್ನಾಟಕದಲ್ಲಿ ಯಾವಾಗ ಗೊತ್ತೇ ?

ಮಂಗಳೂರು(ನವದೆಹಲಿ): 18ನೇ ಲೋಕಸಭಾ ಚುನಾವಣೆಯ ವೇಳಾಪಟ್ಟಿಯನ್ನು ಭಾರತೀಯ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್ ಪ್ರಕಟಿಸಿದ್ದು, ಇದರೊಂದಿಗೆ ದೇಶದಾದ್ಯಂತ ನೀತಿ ಸಂಹಿತೆ ಜಾರಿಯಾಗಿದೆ.

ಲೋಕಸಭೆಯ ಜತೆಗೆ ಒಡಿಶಾ, ಸಿಕ್ಕಿಂ, ಆಂಧ್ರ ಪ್ರದೇಶ ಹಾಗೂ ಅರುಣಾಚಲ ಪ್ರದೇಶದ ವಿಧಾನಸಭೆಗೂ ಚುನಾವಣೆ ನಡೆಯಲಿದ್ದು, ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿದೆ. 7 ಹಂತಗಳಲ್ಲಿ ಚುನಾವಣೆ ನಡೆಯಲಿದೆ ಮೊದಲ ಹಂತದ ಚುನಾವಣೆ ಏ.19ರಂದು ನಡೆಯಲಿದೆ, ಎರಡನೇ ಹಂತದ ಚುನಾವಣೆ ಏ.26ರಂದು, ಮೂರನೇ ಹಂತದ ಚುನಾವಣೆ ಮೇ.7ರಂದು, ನಾಲ್ಕನೇ ಹಂತದ ಚುನಾವಣೆ ಮೇ.13, ಐದನೇ ಹಂತದ ಚುನಾವಣೆ ಮೇ.20, ಆರನೇ ಹಂತದ ಚುನಾವಣೆ ಮೇ.25ರಂದು ಮತ್ತು ಏಳನೇ ಹಂತದ ಚುನಾವಣೆ ಜೂ.1ರಂದು ನಡೆಯಲಿದೆ. ಏಳು ಹಂತದ ಚುನಾವಣೆ ಮತ ಎಣಿಕೆ ಜೂ.4ರಂದು ನಡೆದು ಫಲಿತಾಂಶ ಹೊರಬೀಳಲಿದೆ ಎಂದು ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್‌ ಕುಮಾರ್‌ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ. ಏ.26 ಮತ್ತು ಮೇ.7ರಂದು 2 ಹಂತದಲ್ಲಿ ಕರ್ನಾಟಕದಲ್ಲಿ ಚುನಾವಣೆ ನಡೆಯಲಿದೆ.

ದೇಶದಲ್ಲಿ 97 ಕೋಟಿ ಮತದಾರರಿದ್ದು 10.5 ಲಕ್ಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 1.5 ಕೋಟಿ ಅಧಿಕಾರಿಗಳನ್ನು ಮತ್ತು ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. 1.8 ಕೋಟಿ ಮತದಾರರು ಮೊದಲ ಬಾರಿ ಮತದಾನ ಮಾಡಲಿದ್ದಾರೆ. ಮತದಾನಕ್ಕೆ 55 ಲಕ್ಷ ಇವಿಎಂ ಗಳನ್ನು ಚುನಾವಣೆಯಲ್ಲಿ ಬಳಸಲಾಗುವುದು. ದೇಶದಲ್ಲಿ 47.1 ಕೋಟಿ ಮಹಿಳಾ ಮತದಾರರಿದ್ದು, 49.7 ಪುರುಷ ಮತದಾರರಿದ್ದಾರೆ. 19.74 ಕೋಟಿ ಯುವ ಮತದಾರರು ಮತ ಚಲಾಯಿಸಲಿದ್ದಾರೆ. 85 ವರ್ಷ ಮೇಲ್ಪಟ್ಟ 82 ಲಕ್ಷ ಜನರು ಮತಚಲಾಯಿಸಲಿದ್ದಾರೆ. 12 ರಾಜ್ಯಗಳಲ್ಲಿ ಪುರುಷ ಮತದಾರರಿಗಿಂತ ಮಹಿಳಾ ಮತದಾರರ ಸಂಖ್ಯೆ ಜಾಸ್ತಿ ಇದೆ. 40 ಶೇ ವಿಶೇಷ ಚೇತನರು ಮನೆಯಿಂದಲೇ ಮತದಾನ ಮಾಡಲಿದ್ದಾರೆ. 2.18 ಲಕ್ಷ ಶತಾಯುಷಿಗಳು ಮತ ಚಲಾಯಿಸಲಿದ್ದಾರೆ. 48 ಸಾವಿರ ತೃತೀಯ ಲಿಂಗಿಗಳು ಮತ ಚಲಾಯಿಸಲಿದ್ದಾರೆ.

LEAVE A REPLY

Please enter your comment!
Please enter your name here