ರಸ್ತೆಯಲ್ಲಿ ಕೆಟ್ಟು ನಿಂತಿದ್ದ ಲಾರಿಗೆ ಇನ್ನೊಂದು ಲಾರಿ ಢಿಕ್ಕಿ-ಚಾಲಕನಿಗೆ ಗಾಯ

ಮಂಗಳೂರು(ಚಾಮರಾಜನಗರ): ರಸ್ತೆ ಪಕ್ಕದಲ್ಲಿ ಕೆಟ್ಟು ನಿಂತಿದ್ದ ಲಾರಿಗೆ ಇನ್ನೊಂದು ಲಾರಿ ಢಿಕ್ಕಿ ಹೊಡೆದ ಘಟನೆ ಹನೂರು ತಾಲೂಕಿನ ಗಡಿ ಭಾಗವಾದ ಗರಿಕೆಕಿಂಡಿ ಸಮೀಪ ಮಾ.16ರ ಮುಂಜಾನೆ ನಡೆದಿದೆ.

ಚಾಮರಾಜನಗರದಿಂದ ತಮಿಳುನಾಡಿಗೆ ತೆರುಳುತ್ತಿದ್ದ ಲಾರಿಯೊಂದು ಕೆಟ್ಟು ರಸ್ತೆಯ ಪಕ್ಕದಲ್ಲಿ ನಿಂತಿತ್ತು. ಈ ವೇಳೆ ತಮಿಳುನಾಡಿನಿಂದ ಕರ್ನಾಟಕಕ್ಕೆ ಬರುತ್ತಿದ್ದಂತಹ ಲಾರಿಯೊಂದು ಢಿಕ್ಕಿ ಹೊಡೆದು ರಸ್ತೆಯ ಪಕ್ಕದ ಗೋಡೆಗೂ ಸಹ ಗುದ್ದಿದೆ. ಇದರ ಪರಿಣಾಮ ಲಾರಿಗಳೆರಡು ಜಖಂಗೊಂಡು ಚಾಲಕನಿಗೆ ಗಾಯಗಳಾಗಿವೆ. ಗಾಯಾಳುವನ್ನು ಸಮೀಪದ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಅವಘಡ ಶನಿವಾರ ಮುಂಜಾನೆ ಸಂಭವಿಸಿದೆ ಇದರಿಂದ ಕೆಲ ಕಾಲ ರಸ್ತೆ ಅಡಚಣೆ ಉಂಟಾಗಿತ್ತು ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here