ಮಂಗಳೂರು(ಸುಳ್ಯ):ಕೊಡಗು ಗಡಿಭಾಗದ ಮಡಿಕೇರಿ ತಾಲೂಕು ಕಡಮಕಲ್ಲು ಬಳಿಯ ಕೂಜಿಮಲೆ ವ್ಯಾಪ್ತಿಯಲ್ಲಿ ಬಳಿ ಮಾ.16ರ ಸಂಜೆ ನಕ್ಸಲರು ಸಂಚರಿಸಿರುವ ಶಂಕೆ ವ್ಯಕ್ತವಾಗಿದೆ.
8 ಜನ ಶಂಕಿತ ನಕ್ಸಲರಿದ್ದ ತಂಡ ಕೂಜಿಮಲೆ, ಕಲ್ಮ ಕಾರಿನ ಅಂಗಡಿಯೊಂದ ರಿಂದ 3,500 ರೂ. ಮೌ ಲ್ಯದ ದಿನಸಿ ಖರೀದಿಸಿದ್ದಾರೆ ಎನ್ನಲಾಗಿದೆ. 5 ವರ್ಷದ ಬಳಿಕ ಮತ್ತೆ ಅದೇ ಭಾಗದಲ್ಲಿ ನಕ್ಸಲ್ ತಂಡ ಪ್ರತ್ಯಕ್ಷವಾಗಿದೆ ಎಂದು ಹೇಳಲಾಗಿದೆ. ನಕ್ಸಲರು ಕಾಣಿಸಿಕೊಂಡ ಮಡಿಕೇರಿ ಗ್ರಾಮಾಂತರ ಠಾಣೆ ವ್ಯಾಪ್ತಿಯ ಕಾಲೂರಿನಲ್ಲಿ ಕೂಬಿಂಗ್ ಕಾರ್ಯಾಚರಣೆ ಆರಂಭಗೊಂಡಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಪೊಲೀಸ್ ಇಲಾಖೆ ಈವರೆಗೆ ಈ ಭಾಗದಲ್ಲಿ ನಕ್ಸಲರ ಚಲನವಲನದ ಬಗ್ಗೆ ಯಾವುದೇ ಮಾಹಿತಿ, ಸ್ಪಷ್ಟನೆ ನೀಡಿಲ್ಲ. ಸುಳ್ಯದ ಗುತ್ತಿಗಾರು, ಕೊಲ್ಲಮೊಗರು, ಕಲ್ಮಕಾರು ವರೆಗೂ ಕೂಜಿಮಲೆ ರಬ್ಬರ್ ಎಸ್ಟೇಟ್ ವ್ಯಾಪಿಸಿದೆ. 2012 ರಲ್ಲಿ ಕಾಲೂರು ಗ್ರಾಮದಲ್ಲಿ ಪ್ರತ್ಯಕ್ಷಗೊಂಡಿದ್ದ ನಕ್ಸಲರು ಬಳಿಕ 2018 ರ ಫೆಬ್ರವರಿ ತಿಂಗಳಿನಲ್ಲಿ ಇದೆ ವ್ಯಾಪ್ತಿಯ ಸಂಪಾಜೆ ಗುಡ್ಡೆಗದ್ದೆಯಲ್ಲಿ ಪ್ರತ್ಯಕ್ಷಗೊಂಡಿದ್ದರು.