ಮಂಗಳೂರು(ಪುತ್ತೂರು): ಬಾರಿ ಮಿಂಚಿನ ಪರಿಣಾಮ ತೆಂಗಿನಮರವೊಂದು ಹೊತ್ತಿ ಉರಿದ ಘಟನೆ ಚಾರ್ವಾಕ ಸಮೀಪ ಕೊಪ್ಪ ಎಂಬಲ್ಲಿ ನಡೆದಿದೆ.
ಮಿಂಚಿನ ಕೆನ್ನಾಲಿಗೆ ತೆಂಗಿನಮರಕ್ಕೆ ತಗುಲಿದ್ದು, ಕ್ಷಣಾರ್ಧದಲ್ಲಿ ತೆಂಗಿನ ಮರ ಹೊತ್ತಿ ಉರಿದಿದೆ. ನೋಡನೋಡುತ್ತಿದ್ದಂತೆಯೇ ಬೆಂಕಿ ಕಿಡಿಗಳು ಮರದಿಂದ ಕೆಳಗೆ ಬೀಳತೊಡಗಿದೆ. ಇದರಿಂದಾಗಿ ಪರಿಸರದಲ್ಲಿ ಕೆಲಕಾಲ ಆತಂಕ ಸೃಷ್ಠಿಯಾಗಿತ್ತು. ನಿನ್ನೆ ಸಂಜೆಯಿಂದಲೇ ಪುತ್ತೂರು ಸೇರಿದಂತೆ ಕಡಬ ತಾಲೂಕಿನ ಹಲವೆಡೆ ಮೋಡ ಕವಿದ ವಾತಾವರಣ ಕಂಡು ಬಂದಿತ್ತು. ಕೆಲವೆಡೆ ಮಿಂಚು ಸಿಡಿಲು ಸಹಿತ ಸಣ್ಣ ಪ್ರಮಾಣದಲ್ಲಿ ಮಳೆಯಾಗಿದೆ.
Video Player
00:00
00:00