ದೇವಾಲಯದ ಉತ್ಸವ ವೇಳೆ ಆನೆಗಳ‌ ಕಾಳಗ-ಕಾಲ್ತುಳಿತದಲ್ಲಿ ಹಲವು ಭಕ್ತರಿಗೆ ಗಾಯ

ಮಂಗಳೂರು(ತಿರುವನಂತಪುರಂ): ಕೇರಳದ ಆರಾಟ್ಟುಪುಳ ಉತ್ಸವದ ವೇಳೆ ಎರಡು ಆನೆಗಳ ನಡುವೆ ಕಾಳಗ ನಡೆದಿದ್ದು, ಕಾಲ್ತುಳಿತದಿಂದ ಹಲವರು ಗಾಯಗೊಂಡಿರುವ ಘಟನೆ ನಡೆದಿದೆ.

ಮಾ.23ರಂದು ರಾತ್ರಿ ದೇವರನ್ನು ಆನೆಯ ಮೇಲೆ ಕೂರಿಸಿ ಮೆರವಣಿಗೆ ಮಾಡುವ ವೇಳೆ ಈ ಘಟನೆ ನಡೆದಿದ್ದು, ಎರಡು ಆನೆಗಳ ನಡುವೆ ನಡೆದ ಕಾಳಗದಲ್ಲಿ ಹಲವರು ಗಾಯಗೊಂಡಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.ಎರಡು ಆನೆಗಳಿಗೆ ಅಲಂಕಾರ ಮಾಡಿ ಅವುಗಳ ಮೇಲೆ ದೇವರ ಮೂರ್ತಿ ಇಟ್ಟು ಮೆರವಣಿಗೆ ಹೊರಡಲಾಗಿತ್ತು. ಈ ಮೆರವಣಿಗೆ ಕಣ್ತುಂಬಿಕೊಳ್ಳಲು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಇದ್ದಕ್ಕಿದ್ದಂತೆ ಕೆರಳಿದ ಆನೆ ಅದರ ಮುಂದಿನಿಂದ ಹೋಗುತ್ತಿದ್ದವನ ಮೇಲೆ ದಾಳಿ ಮಾಡಿದೆ. ಆತ ತಪ್ಪಿಸಿಕೊಂಡಾಗ ಅಲ್ಲಿದ್ದವರು ಆನೆ ಬಳಿ ಓಡಿದ್ದಾರೆ. ಇದರಿಂದ ಮತ್ತಷ್ಟು ಕೆರಳಿದ ಆನೆ ಎಲ್ಲರ ಮೇಲೂ ದಾಳಿಗೆ ಮುಂದಾಗಿದೆ.
ಎದುರು ಹೋಗುತ್ತಿದ್ದ ಆನೆಯ ಮೇಲೂ ದಾಳಿ ಮಾಡಿದ್ದು, ಎರಡೂ ಆನೆಗಳ ನಡುವೆ ಕಾಳಗ ನಡೆದಿದೆ. ಆನೆಗಳನ್ನು ಹತೋಟೆಗೆ ತರಲು ಮಾವುತರು ಒಂದು ಗಂಟೆಗೂ ಹೆಚ್ಚು ಕಾಲ ಹರಸಾಹಸ ಮಾಡಬೇಕಾಯಿತು. ಆನೆಗಳು ಶಾಂತವಾದ ಬಳಿಕ ಸರಪಳಿ ಹಾಕಿ ದೇವಸ್ಥಾನಕ್ಕೆ ಕರೆತರಲಾಯಿತು. ಆರಾಟ್ಟುಪುಳ ದೇವಾಲಯವನ್ನು 8ನೇ ಶತಮಾನದಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ಶ್ರೀರಾಮಚಂದ್ರನ ಗುರು ವಶಿಷ್ಠರ ದೈವೀ ಆತ್ಮವು ಈ ದೇವಾಲಯದ ವಿಗ್ರಹಗಳಲ್ಲಿ ನೆಲೆಸಿದೆ ಎನ್ನುವ ಪ್ರತೀತಿ ಇದೆ.

LEAVE A REPLY

Please enter your comment!
Please enter your name here