ಮಂಗಳೂರು/ಕಲಬುರಗಿ : ವಿಪಕ್ಷ ನಾಯಕ ಆರ್.ಅಶೋಕ್ ಅವರು, ಹಣೆಗೆ ಕುಂಕುಮ ಹಚ್ಚಲು ನಿರಾಕರಿಸಿದ ಘಟನೆ ಕಲಬುರಗಿಯಲ್ಲಿ ನಡೆದಿದೆ.
ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಸುಲೆಪೇಟ್‌ನಲ್ಲಿರುವ ಬಿಜೆಪಿ ಕಚೇರಿಗೆ ಮಾ.24ರಂದು ಭೇಟಿ ನೀಡಿದ್ದು, ಪಕ್ಷದ ಹಿರಿಯ ಮುಖಂಡರೊಬ್ಬರು ಕುಂಕುಮ ಹಚ್ಚಲು ಮುಂದಾದಾಗ ನಿರಾಕರಿಸಿದ್ದಾರೆ.
ಕಚೇರಿಗೆ ಆಗಮಿಸಿದ ಅಶೋಕ್ ಅವರಿಗೆ ಬಿಜೆಪಿ ಮುಖಂಡರು ಹಾರ ಹಾಕಿ ಸ್ವಾಗತಿಸಲು ಮುಂದಾಗಿದ್ದರು. ಈ ವೇಳೆ ಎರಡು ಹಾರಗಳನ್ನು ತಾವು ಹಾಕಿಕೊಳ್ಳದೆ ಬಿಜೆಪಿ ಹಿರಿಯ ಮುಖಂಡ ಡಾ ವಿಶ್ವನಾಥ್ ಪವಾರ್ ಮತ್ತು ಮತ್ತೊಬ್ಬರಿಗೆ ಹಾಕಿ ಗೌರವಿಸಿದ್ದರು. ಈ ನಡುವೆ ಡಾ ವಿಶ್ವನಾಥ್ ಪವಾರ್ ಅಶೋಕ್ ಹಣೆಗೆ ಕುಂಕುಮ ಇಡಲು ಮುಂದಾಗಿದ್ದಾರೆ. ಆದರೆ ಅಶೋಕ್ ಕುಂಕುಮ ಹಚ್ಚದಂತೆ, ‘ಬೇಡ’ ಎನ್ನುವ ಮೂಲಕ ತಡೆದಿದ್ದಾರೆ. ಇದರಿಂದ ಅವಾಕ್ಕಾದ ವಿಶ್ವನಾಥ್ ತಂದಿದ್ದಂತಹ ಶಾಲು ಹಾಕಿ ಅಶೋಕ್ ಅವರನ್ನು ಸನ್ಮಾನಿಸಿದ್ದಾರೆ. ಈ ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿದ್ದು, ಬಿಜೆಪಿ ಮುಖಂಡನ ನಡೆಗೆ ವಿರೋಧ ವ್ಯಕ್ತವಾಗಿದೆ.
ಸಿದ್ದರಾಮಯ್ಯ ಹಿಂದೂ ವಿರೋಧಿ, ಕೇಸರಿ ಕಂಡರೆ ಆಗಲ್ಲ, ಕೇಸರಿ ಶಲ್ಯ ಧರಿಸಲ್ಲ, ಕುಂಕುಮ ಹಾಕಲ್ಲ ಹಾಗೂ ಡಿ ಕೆ ಶಿವಕುಮಾರ್ ಅವರು ಮುಸ್ಲಿಮರನ್ನು ನನ್ನ ಬ್ರದರ್ಸ್ ಎಂದು ಕರೆಯುತ್ತಾರೆ ಎಂದೆಲ್ಲಾ ಟೀಕಿಸುವ ರಾಜ್ಯದ ಬಿಜೆಪಿ ನಾಯಕರು, ತಮ್ಮದೇ ನಾಯಕನ ಈ ನಡೆಗೆ ಏನು ಹೇಳುತ್ತಾರೆ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.
ವೀಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ:
ವಿಪಕ್ಷ ನಾಯಕ ಆರ್.ಅಶೋಕ್, ಹಣೆಗೆ ಕುಂಕುಮ ಇಡಲು ನಿರಾಕರಿಸಿದ ಘಟನೆ ಕಲಬುರಗಿಯಲ್ಲಿ ನಡೆದಿದೆ. ಚಿಂಚೋಳಿಯ ಸುಲೆಪೇಟ್‌ನಲ್ಲಿರುವ ಬಿಜೆಪಿ ಕಚೇರಿಗೆ ಇಂದು(ಮಾ.24) ಭೇಟಿ ನೀಡಿದಾಗ ಹಿರಿಯ ಮುಖಂಡರೊಬ್ಬರು ಕುಂಕುಮ ಹಚ್ಚಲು ಮುಂದಾದಾಗ ನಿರಾಕರಿಸಿದ್ದಾರೆ. ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ.@INCKarnataka @BJP4Karnataka pic.twitter.com/a4lGoOfN8l
— eedina.com (@eedinanews) March 24, 2024