ನಾಳೆಯಿಂದ ನಾಮಪತ್ರ ಸಲ್ಲಿಕೆ ಆರಂಭ-ಏ.4ರ 3 ಗಂಟೆವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ

ಮಂಗಳೂರು:  2024 ರ ಲೋಕಸಭಾ ಚುನಾವಣೆ ಈಗಾಗಲೇ ದಿನಾಂಕ ಘೋಷಣೆಯಾಗಿದ್ದು, ನಾಳೆಯಿಂದ ನಾಮಪತ್ರ ಸಲ್ಲಿಸಬಹುದಾಗಿದೆ. ಏಪ್ರಿಲ್ 4 ರ 3 ಗಂಟೆ ವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ಇದೆ. ಜಿಲ್ಲಾಧಿಕಾರಿ ಕಚೇರಿಯ ಮೂರನೇ ಮಹಡಿಯಲ್ಲಿ ಅವಕಾಶ ಮಾಡಿಕೊಡಲಾಗಿದೆ. ಮಾ.29 ಮತ್ತು 31ರಂದು ಸರ್ಕಾರಿ ರಜೆ ಇದ್ದು ಉಳಿದ ದಿನಗಳಲ್ಲಿ ನಾಮಪತ್ರ ಸಲ್ಲಿಸಬಹುದಾಗಿದೆ.  ನಾಮಪತ್ರ ಸಲ್ಲಿಕೆ ವೇಳೆ ಅಭ್ಯರ್ಥಿಗಳು ಕೆಲವೊಂದು ನಿಯಮಗಳನ್ನು ಪಾಲನೆ ಮಾಡುವಂತೆ ಸೂಚಿಸಲಾಗಿದೆ. ಜಿಲ್ಲಾಧಿಕಾರಿ ಕಚೇರಿಯ ನೂರು ಮೀಟರ್ ಒಳಗಡೆ ಈ ನಿಯಮ ಜಾರಿಯಲ್ಲಿರಲಿದೆ.

ಪ್ರತಿ ಅಭ್ಯರ್ಥಿಯ ಮೂರು ವಾಹನಗಳಿಗಷ್ಟೇ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಬರಲು ಅವಕಾಶ. ನಾಮಪತ್ರ ಸಲ್ಲಿಕಾ ಕೇಂದ್ರದೊಳಗೆ ಅಭ್ಯರ್ಥಿ ಸೇರಿ ಐದು ಮಂದಿಗೆ ಮಾತ್ರ ಅವಕಾಶ. ಅಭ್ಯರ್ಥಿ ನಾಮಪತ್ರ ಸಲ್ಲಿಕೆ ಮುಂದಾದ ಬಳಿಕ ಅಭ್ಯರ್ಥಿಯ ಚುನಾವಣಾ ಖರ್ಚುವೆಚ್ಚಗಳ ಲೆಕ್ಕಾಚಾರ ಆರಂಭ. ಅಭ್ಯರ್ಥಿ ಚುನಾವಣಾ ಖರ್ಚು ವೆಚ್ಚಗಳ ಬಗ್ಗೆ ನೂತನ ಬ್ಯಾಂಕ್ ಖಾತೆ ಸಲ್ಲಿಕೆ ಮಾಡಬೇಕು. ಚುನಾವಣಾ ಪ್ರಚಾರದ ಯಾವುದೇ ಪ್ರಿಂಟಿಂಗ್ ನಲ್ಲಿ ಪ್ರಿಂಟರ್ಸ್ ಮಾಹಿತಿ ಹಾಕಬೇಕು ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here