10 ಕೋಟಿ ರೂ. ಲಾಟರಿ ಗೆದ್ದು ರಾತ್ರೋರಾತ್ರಿ ಕೋಟ್ಯಾಧಿಪತಿಯಾದ ಕಣ್ಣೂರಿನ ಆಟೋ ಚಾಲಕ

ಮಂಗಳೂರು: ಕೇರಳದ ಆಟೋ ಚಾಲಕರೊಬ್ಬರು ನಿನ್ನೆ ರಾತ್ರಿಯಷ್ಟೇ ಲಾಟರಿ ಟಿಕೆಟ್ ಖರೀದಿ ಮಾಡಿದ್ದು, ಇಂದು ಬೆಳಗ್ಗೆ ಲಾಟರಿಯಲ್ಲಿ ಪ್ರಥಮ ಬಹುಮಾನ 10 ಕೋಟಿ ರೂ. ಗೆದ್ದು ಕೋಟ್ಯಾಧಿಪತಿಯಾಗಿದ್ದಾರೆ.

ಕೇರಳದ ಕಣ್ಣೂರಿನ ಆಳಕೋಡ್ ನಿವಾಸಿ ನಾಸರ್ 10 ಕೋಟಿ ರೂ. ಬಂಪರ್ ಲಾಟರಿ ಗೆದ್ದ ವ್ಯಕ್ತಿ. ಕೇರಳದ ಕಾರ್ತಿಕಪುರದ ರಾಜರಾಜೇಶ್ವರಿ ಲಾಟರಿ ಏಜನ್ಸಿಯಿಂದ ನಾಸರ್ ಲಾಟರಿ ಟಿಕೆಟ್ ಖರೀಸಿದ್ದರು. ಅವರ ಅದೃಷ್ಟ ಖುಲಾಯಿಸಿ ಈ ಲಾಟರಿಯಲ್ಲಿ ಪ್ರಥಮ ಬಹುಮಾನ 10 ಕೋಟಿ ರೂ. ಹಣ ಗೆದ್ದಿದ್ದಾರೆ. ಕಾರ್ತಿಕಪುರದಲ್ಲಿ ಆಟೋ ಚಾಲಕನಾಗಿ ಕೆಲಸ ಮಾಡುವ ನಾಸರ್ ನಿನ್ನೆ ರಾತ್ರಿಯಷ್ಟೇ ಲಾಟರಿ ಟಿಕೆಟ್ ಖರೀದಿಸಿದ್ದರು ಎಂದು ಲಾಟರಿ ಏಜೆಂಟ್ ರಾಜು ತಿಳಿಸಿದ್ದಾರೆ. ಟಿಕೆಟ್ ಖರೀದಿಸಿದ ಒಂದೇ ರಾತ್ರಿಯಲ್ಲಿ ನಾಸಿರ್ ಈಗ ಕೋಟ್ಯಾಧಿಪತಿಯಾಗಿದ್ದಾರೆ.

LEAVE A REPLY

Please enter your comment!
Please enter your name here