ಯುವಕನೊಬ್ಬನ ಮೇಲೆ ಅಮಾನುಷ ಹಲ್ಲೆ-ಸಿಸಿಟಿವಿ ದೃಶ್ಯ ವೈರಲ್-ಯಾರಿವನು? ಯಾರಿವನು? ಸಾರ್ವಜನಿಕರ ಪ್ರಶ್ನೆ – ಬೆನ್ನುಬಿದ್ದ ಪೊಲೀಸರು

ಮಂಗಳೂರು: ಮಂಗಳೂರು ಹೊರವಲಯದ ಅರ್ಕುಳ ಎಂಬಲ್ಲಿ  ನಡೆದ ಘಟನೆ ಎನ್ನಲಾಗಿರುವ ಹೊರ ರಾಜ್ಯದ ಯುವಕನ ಮೇಲೆ ಅಮಾನುಷವಾಗಿ ಬೆಲ್ಟ್ ನಿಂದ ಹಲ್ಲೆ ನಡೆಸುತ್ತಿರುವ ದೃಶ್ಯ ವೈರಲ್‌ ಆಗಿದೆ.

ಮನೆಮಂದಿಯ ಯಾವುದೋ ವಸ್ತು ಕಾಣೆಯಾಗಿದ್ದು, ಯುವಕನ ಮೇಲೆ ಶಂಕೆ ವ್ಯಕ್ತಪಡಿಸಿ ಹಲ್ಲೆ ನಡೆಸುತ್ತಿರುವುದು ಮೇಲ್ನೋಟಕ್ಕೆ ವೈರಲ್‌ ವಿಡಿಯೋದಲ್ಲಿ ಕಂಡುಬರುತ್ತದೆ. ಒಬ್ಬಾತ ಯುವಕನ ಎರಡೂ ಕೈಗಳನ್ನು ಹಿಡಿದುಕೊಂಡಿದ್ದು, ಮತ್ತೋರ್ವ ಅಮಾನುಷವಾಗಿ ಬೆಲ್ಟ್ ಮತ್ತು ಚೈಯರ್ ನಲ್ಲಿ ಹಲ್ಲೆ ನಡೆಸುತ್ತಿದ್ದು ಬೋಲೋ ಬೋಲೋ ಎಂದು ಹಿಂದಿಯಲ್ಲಿ ಕೇಳುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಒಂದೆಡೆ ಹೊರರಾಜ್ಯದ ಯುವಕನ ಜೊತೆಗಿರುವ ವ್ಯಕ್ತಿ ಮೇಲೂ ಹಲ್ಲೆ ನಡೆಸಲಾಗುತ್ತದೆ. ವಿಡಿಯೋ ವೈರಲ್‌ ಆಗಿದ್ದು, ಮಂಗಳೂರು ಗ್ರಾಮಾಂತರ ಪೋಲೀಸರು ಘಟನೆ ಹಿಂದಿನ ಸತ್ಯತೆ ತಿಳಿಯಲು ಮಾಹಿತಿ ಕಲೆ ಹಾಕುತ್ತಿದ್ದಾರೆ. ಮನೆಯವರೆನ್ನಲಾದ ಮಹಿಳೆಯೊಬ್ಬರು 2 ಲಕ್ಷ ಎನ್ನುವ ಮಾತು ವಿಡಿಯೋದಲ್ಲಿ ಕೇಳಿಬಂದಿದೆ.

 

LEAVE A REPLY

Please enter your comment!
Please enter your name here