ಏ.1 ರಿಂದ ಟೋಲ್ ದರ ಹೆಚ್ಚಳ – ವಾಹನ ಸವಾರರ ಜೇಬಿಗೆ ಕತ್ತರಿ

ಮಂಗಳೂರು: 2024-25ನೇ ಹಣಕಾಸು ವರ್ಷ ಏ.1 ರಿಂದ ಆರಂಭವಾಗಲಿದ್ದು, ರಾಷ್ಟ್ರಿಯ ಹೆದ್ದಾರಿಗಳಲ್ಲಿನ ಟೋಲ್ ದರಗಳು ಮತ್ತೆ ಹೆಚ್ಚಳವಾಗಲಿದೆ. ಈ ಮೂಲಕ ಮತ್ತೆ ವಾಹನ ಸವಾರರ ಜೇಬಿಗೆ ಕತ್ತರಿ ಬೀಳಲಿದೆ.

ಕರಾವಳಿಯಲ್ಲಿರುವ ಬಂಟ್ವಾಳ ಸಮೀಪದ ಬ್ರಹ್ಮರಕೂಟ್ಲು ಕೇರಳ- ಕರ್ನಾಟಕ ಗಡಿಯ ತಲಪಾಡಿ, ಉಡುಪಿ ಜಿಲ್ಲೆಯ ಹೆಜಮಾಡಿ ಮತ್ತು ಸಾಸ್ತಾನದ ಗುಂಡ್ಮಿ ಟೋಲ್ ಗೇಟ್ ಗಳಲ್ಲಿ ಪರಿಷ್ಕ್ರತ ಶುಲ್ಕ ಜಾರಿಗೆ ಬರಲಿದೆ. ಆದರೆ ಈ ಬಾರಿ ಏಕಮುಖ ಸಂಚಾರದ ಶುಲ್ಕದಲ್ಲಿ ಹೆಚ್ಚಿನ ಬದಲಾವಣೆ ಮಾಡಿಲ್ಲ. ದ್ವಿಮುಖ ಸಂಚಾರ ಮತ್ತು ಮಾಸಿಕ ಪಾಸ್ ನ ಶುಲ್ಕದಲ್ಲಿ ಏರಿಕೆ ಮಾಡಲಾಗಿದೆ. ಪ್ರತೀ ವರ್ಷ ಎಪ್ರಿಲ್ ಒಂದರಿಂದ ದೇಶಾದ್ಯಂತ ಟೋಲ್ ಶುಲ್ಕ ಪರಿಷ್ಕರಣೆಯಾಗುತ್ತದೆ. ಈ ಪ್ರಕಾರ ಬ್ರಹ್ಮರಕೂಟ್ಲು ಟೋಲ್ ನಲ್ಲಿ ಕಾರು, ಜೀಪು, ವ್ಯಾನ್ ದ್ವಿಮುಖ ಸಂಚಾರದ ಶುಲ್ಕದಲ್ಲಿ 5 ರೂ. ಏರಿಕೆ ಕಂಡಿದ್ದು ಪರಿಷ್ಕ್ರತ ದರ 50 ರೂ. ಆಗಿರಲಿದೆ. ತಲಪಾಡಿಯಲ್ಲಿ 80 ರೂ, ಹೆಜಮಾಡಿಯಲ್ಲಿ 75, ಸಾಸ್ತಾನ ಗುಂಡ್ಮಿ 90 ರೂ. ಪರಿಷ್ಕ್ರತ ದರವಾಗಿದೆ. ಟೋಲ್ ದರ ಹೆಚ್ಚಳವವು ವಾಹನ ಸವಾರರ ಜೇಬಿಗೆ ಭಾರವಾಗಿ ಪರಿಣಮಿಸಲಿದೆ.

LEAVE A REPLY

Please enter your comment!
Please enter your name here