



ಮಂಗಳೂರು:ಜಿಲ್ಲೆಯಲ್ಲಿ ಸಮೀಕ್ಷೆ ಮಾಡುವ ಮೂಲಕ ಕಾಂಗ್ರೆಸ್ ಹೊಸ ಅಭ್ಯರ್ಥಿಯಾಗಿ ದಕ್ಷ ಕಾರ್ಯಕರ್ತ ಪದ್ಮರಾಜ್ ಅವರನ್ನು ಆಯ್ಕೆ ಮಾಡಿ ಚುನಾವಣಾ ಕಣಕ್ಕಿಳಿಸಿದೆ.ಕಳೆದ 32 ವರ್ಷಗಳಿಂದ ಕೈತಪ್ಪಿರುವ ಲೋಕಸಭಾ ಕ್ಷೇತ್ರವನ್ನು ಮರು ವಶ ಪಡೆದುಕೊಳ್ಳಬೇಕಾಗಿದೆ. ಸುಳ್ಳನ್ನೇ ಬಂಡವಾಳ ಮಾಡಿಕೊಂಡಿರುವ ಬಿಜೆಪಿಯನ್ನು ಸೋಲಿಸಬೇಕಾಗಿದೆ. ಎಂದು ಮಾಜಿ ಸಚಿವ ಅಭಯಚಂದ್ರ ಜೈನ್ ಹೇಳಿದ್ದಾರೆ.







ಮಂಗಳೂರಿನಲ್ಲಿ ಪತ್ರಿಕಾಗೋಷ್ಠಯಲ್ಲಿ ಮಾತನಾಡಿದ ಅವರು ನ.1 ಲೋಕಸಭಾ ಸದಸ್ಯರಿಗೆ ಬಿಜೆಪಿ ಸೀಟ್ ಸಿಕ್ಕಿಲ್ಲ ಇದುವರೆಗು ಬರೇ ಪ್ರಚಾರ ಮತ್ತು ಗಿಮಿಕ್ ಮಾಡುವ ಮೂಲಕ ಹೋಪ್ ಪಡೆದುಕೊಳ್ಳುತ್ತಿದ್ದರು. ಈ ಹಿಂದಿನ ಪ್ರದಾನಿಗಳು ಸಾಮಾನ್ಯವಾಗಿ ಅಂಬಾಸಿಡರ್ ಕಾರು ಬಳಸುತ್ತಿದ್ದರು. ದೇಶಿ ವಾಹನ ಬಳಕೆ ಮಾಡುವ ಬಗ್ಗೆ ವಾದ ಮಾಡುವವರು ಬಿ ಎಮ್ ಡಬ್ಲೂ, ರೇಂಜ್ ರೋವರ್, ರೋಲ್ಸ್ ರಾಯ್ಸ್ ಕಾರಿನಲ್ಲಿ ಸುತ್ತಾಡುತ್ತಿದ್ದಾರೆ. ಎಂದು ಟೀಕಿಸಿದ ಅವರು ನಮಗೆ ಪಾರ್ಲಿಮೆಂಟ್ ನಲ್ಲಿ ಮಾತನಾಡುವ ಅಭ್ಯರ್ಥಿ ಬೇಕು. ಹಾಗಾಗಿ ಜನರು ಪದ್ಮರಾಜ್, ಜಯಪ್ರಕಾಶ್ ಹೆಗ್ಡೆಯವರಂತವರಿಗೆ ಮತ ಹಾಕುವ ಮೂಲಕ ಗೆಲ್ಲಿಸಬೇಕಾಗಿದೆ. ಹಿಂದೆ ಅಭಿವೃದ್ದಿ, ಬಡತನ ನಿರ್ಮೂಲನೆಗೆ ಪ್ರಾಶಸ್ತ್ಯವಿತ್ತು. ಬಿಜೆಪಿ ಯಾವ ಯೋಜನೆಗಳನ್ನು ತಂದಿದ್ದರು. ಭಾವನಾತ್ಮಕವಾಗಿ ಜನರನ್ನು ಕೆರಳಿಸಿ ಚುನಾವಣೆಯಲ್ಲಿ ಗೆಲ್ಲುತ್ತಿದ್ದಾರೆ. ಈ ಬಾರಿ ಕಾರ್ಯಕರ್ತರು ದ.ಕ ಜಿಲ್ಲೆಯಲ್ಲಿ ಕಾಂಗ್ರೆಸ್ ಅನ್ನು ಗೆಲ್ಲಿಸಲಿದ್ದಾರೆ. ಎಂದವರು ಹೇಳಿದ್ದಾರೆ.



ಪತ್ರಿಕಾಗೋಷ್ಠಿಯಲ್ಲಿ ನೀರಾಜ್ ಪಾಲ್, ಸುದಿರ್, ಶುಭೋದಯ ಆಳ್ವಾ , ನಝೀರ್ ಬಜಾಲ್ ಉಪಸ್ಥಿತರಿದ್ದರು.













