ಈ ವಾರದಲ್ಲಿ ಕರ್ನಾಟಕ, ತೆಲಂಗಾಣ ಸೇರಿದಂತೆ ಹಲವು ಪ್ರದೇಶಗಳಲ್ಲಿ ಧಾರಾಕಾರ ಮಳೆ ಸಾಧ್ಯತೆ 

ಮಂಗಳೂರು(ನವದೆಹಲಿ): ಮುಂದಿನ ಏಳು ದಿನಗಳಲ್ಲಿ ಪಶ್ಚಿಮ ಹಿಮಾಲಯ ಪ್ರದೇಶದಲ್ಲಿ ಸಾಧಾರಣ ಮಳೆ ಮತ್ತು ಹಿಮಪಾತವಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಹವಾಮಾನ ಇಲಾಖೆಯ ಬೆಳಗಿನ ಬುಲೆಟಿನ್ ಪ್ರಕಾರ, ಜಮ್ಮು-ಕಾಶ್ಮೀರ-ಲಡಾಖ್-ಗಿಲ್ಗಿಟ್-ಬಾಲ್ಟಿಸ್ತಾನ್-ಮುಜಾಫರಾಬಾದ್, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಏಪ್ರಿಲ್ 3 ರಿಂದ 5 ರ ವರೆಗೆ ಮಳೆಯಾಗಲಿದ್ದು, ಏಪ್ರಿಲ್​ 4-5 ರ ವರೆಗೆ ಪಶ್ಚಿಮ ಉತ್ತರ ಪ್ರದೇಶದ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು ಮತ್ತು ಸಿಡಿಲು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಮುಂದಿನ ಏಳು ದಿನಗಳಲ್ಲಿ ಛತ್ತೀಸ್‌ಗಢ, ತೆಲಂಗಾಣ, ಮರಾಠವಾಡ, ವಿದರ್ಭ, ಕೊಂಕಣ, ಗೋವಾ ಮತ್ತು ಏಪ್ರಿಲ್ 5-8 ರ ನಡುವೆ ಕೊಂಕಣ ಮತ್ತು ಗೋವಾ ಸೇರಿದಂತೆ ಇತರೆ ಕೆಲವು ಸ್ಥಳಗಳಲ್ಲಿ ಮಳೆಯಾಗಲಿದೆ ಎಂದು ಐಎಂಡಿ ಹೇಳಿದೆ. ಈಶಾನ್ಯದಲ್ಲಿ, ಅರುಣಾಚಲ ಪ್ರದೇಶದಲ್ಲಿ ಏಪ್ರಿಲ್ 2-5 ರ ನಡುವೆ ಮಳೆಯಾಗುತ್ತದೆ ಮತ್ತು ಏಪ್ರಿಲ್ 6-8 ರ ನಡುವೆ ಭಾರೀ ಮಳೆಯಾಗುವ ಸಾಧ್ಯತೆಗಳಿವೆ. ಏಪ್ರಿಲ್ 4-7 ರ ನಡುವೆ ಅಸ್ಸೋಂ ಮತ್ತು ಮಿಜೋರಾಂನಲ್ಲಿ ಭಾರೀ ಮಳೆ ನಿರೀಕ್ಷಿಸಲಾಗಿದೆ. ಅದೇ ರೀತಿ, ಜಾರ್ಖಂಡ್, ಒಡಿಶಾ, ಪಶ್ಚಿಮ ಬಂಗಾಳದ ಗಂಗಾನದಿ ಪ್ರದೇಶ, ಕರ್ನಾಟಕದ ಕರಾವಳಿ-ಉತ್ತರ-ದಕ್ಷಿಣ ಪ್ರದೇಶಗಳಲ್ಲಿಯೂ ಏಪ್ರಿಲ್ 5-8 ರ ನಡುವೆ ತುಂತುರು ಮಳೆಯಾಗುವ ಸಾಧ್ಯತೆಯಿದೆ.

ಚಂಡಮಾರುತದ ಪರಿಚಲನೆಯಿಂದ ಮತ್ತು ಹವಾಮಾನ ವೈಪರೀತ್ಯದಿಂದಾಗಿ ಮುಂದಿನ ಏಳು ದಿನಗಳಲ್ಲಿ ಹಿಮಾಲಯ, ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂನಲ್ಲಿ ಪ್ರತ್ಯೇಕವಾದ ಗುಡುಗು ಮತ್ತು ಮಿಂಚುಗಳೊಂದಿಗೆ ಲಘು ಮತ್ತು ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ. ಹವಾಮಾನ ಇಲಾಖೆಯು ಮಧ್ಯಪ್ರದೇಶ, ಕರ್ನಾಟಕದ ಕೆಲವು ಭಾಗಗಳು, ಜಾರ್ಖಂಡ್, ವಿದರ್ಭ, ಪಶ್ಚಿಮ ಬಂಗಾಳದ ಗಂಗಾನದಿ ಪ್ರದೇಶದ ಸುತ್ತ ಮುತ್ತ ಮುಂದಿನ ಏಳು ದಿನಗಳವರೆಗೆ ಹೆಚ್ಚು ಉಷ್ಣಾಂಶ ಇರುತ್ತದೆ ಎಂದು ಐಎಂಡಿ ಹೇಳಿದೆ. ಈ ವರ್ಷ ಏಪ್ರಿಲ್ ಅಂತ್ಯದ ವೇಳೆಗೆ ಮತ್ತು ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ ದೇಶವು ತೀವ್ರ ತರವಾದ ಪರಿಸ್ಥಿತಿಗಳನ್ನು ಅನುಭವಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಎಲ್ಲಾ ಪಕ್ಷಗಳಿಗೆ ಮುಂಚಿತವಾಗಿ ತಯಾರಿ ನಡೆಸುವುದು ಮುಖ್ಯವಾಗಿದೆ ಎಂದು ಇಲ್ಲಿ ಗಮನಿಸಬೇಕಾದ ಅಂಶವಾಗಿದೆ. 2024 ರ ಲೋಕಸಭಾ ಚುನಾವಣೆಗೆ ಮುನ್ನ ಹವಾಮಾನ ಇಲಾಖೆಯು ಹೀಟ್​ವೇವ್​ ಬಗ್ಗೆ ಸಲಹೆಯನ್ನು ನೀಡಿದೆ, ಏಕೆಂದರೆ ಈ ಬಾರಿ ಹೆಚ್ಚು ಬಿಸಿಗಾಳಿ ಬೀಸುವ ಸಾಧ್ಯತೆಯಿದೆ ಎಂದು ಐಎಂಡಿ ಹೇಳಿದೆ.

LEAVE A REPLY

Please enter your comment!
Please enter your name here