ಬಾರ್ಬಿ ಡಾಲ್ ತರ ಕಾಣಲು 43 ಶಸ್ತ್ರಚಿಕಿತ್ಸೆಗೆ ಒಳಗಾದ ಯುವತಿ

ಮಂಗಳೂರು: ಸುಂದರವಾಗಿ ಕಾಣ್ಬೇಕು ಅಂತ ಬ್ಯೂಟಿ ಪಾರ್ಲರ್​ಗೆ ಹೋಗೋದನ್ನು, ತಾವೇ ಒಂದಷ್ಟು ಬ್ಯೂಟಿ ಕೇರ್​ಗಳನ್ನು ಮಾಡಿಕೊಳ್ಳುವುದನ್ನು ಕೇಳಿರ್ತೀವಿ. ಆದರೆ ಇಲ್ಲೊಂದು ಮಹಿಳೆ ಬಾರ್ಬಿ ಗೊಂಬೆಯಂತೆ ಸುಂದರವಾಗಿ ಕಾಣಬೇಕೆಂದು ಬಯಸಿ ಬರೋಬ್ಬರಿ 43 ಬಾರಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾಳೆ. ಪರಿಣಾಮ ಅವಳ ಮುಖ ವಿಚಿತ್ರವಾಗಿ ಕಾಣತೊಡಗಿದೆ. ಈಕೆ ಇಲ್ಲಿಯ ವರೆಗೆ ತುಟಿ, ಮೂಗು, ಮುಖ ಮತ್ತು ಸ್ತನವನ್ನು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾಳೆ.

ಇರಾಕ್‌ನ ಬಾಗ್ದಾದ್‌ನ ದಾಲಿಯಾ ನಯೀಮ್ ಎಂಬ ಹೆಸರಿನ ಈ ಮಹಿಳೆ ನಿರೂಪಕಿ ಮತ್ತು ನಟಿಯಾಗಿ ಗುರುತಿಸಿಕೊಂಡಿದ್ದಾಳೆ. ಸೋಷಿಯಲ್ ಮೀಡಿಯಾದಲ್ಲೂ ಸಖತ್​​ ಫೇಮಸ್ ಆಗಿರುವ ಈ ಮಹಿಳೆ ಇನ್ಸ್ಟಾಗ್ರಾಮ್​​​​ನಲ್ಲಿ 9 ಲಕ್ಷದ 95 ಸಾವಿರ ಫಾಲೋವರ್ಸ್​ಗಗಳನ್ನು ಹೊಂದಿದ್ದಾರೆ. ಆಕೆಯ ಅಭಿಮಾನಿಗಳು ಆಕೆಯನ್ನು ‘ಇರಾಕಿ ಬಾರ್ಬಿ’ ಎಂದೂ ಕರೆಯುತ್ತಾರೆ.

https://www.instagram.com/p/CcS8eyTDMJa/?utm_source=ig_web_copy_link

LEAVE A REPLY

Please enter your comment!
Please enter your name here