ಶೂಟಿಂಗ್​ ವೇಳೆ ನಟ ಅಜಿತ್​ ಕಾರು ಅಪಘಾತ-ವಿಡಿಯೋ ವೈರಲ್​

ತಮಿಳು ಚಿತ್ರರಂಗದ ಖ್ಯಾತ ನಟ ಅಜಿತ್ ಕುಮಾರ್ ಡ್ಯೂಪ್​ ಬಳಸದೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಚೇಸಿಂಗ್​ ಮತ್ತು ಸಾಹಸ ದೃಶ್ಯಗಳಲ್ಲಿ ತಮ್ಮದೇ ಆದ ಸಾಹಸಗಳನ್ನು ಪ್ರದರ್ಶಿಸುವಲ್ಲಿ ಅವರು ಪ್ರಸಿದ್ಧರಾಗಿದ್ದಾರೆ. ಅವರು ಈ ಮೊದಲು ಸಾಹಸ ದೃಶ್ಯಗಳಲ್ಲಿ ನಟಿಸುವಾಗ ಅನೇಕ ಬಾರಿ ಗಾಯಗಳನ್ನು ಮಾಡಿಕೊಂಡಿದ್ದರು. ಹಾಗಂತ ಅದರಿಂದ ಅವರ ಉತ್ಸಾಹ ಕಡಿಮೆ ಆಗಿಲ್ಲ. ಕಳೆದ ವರ್ಷ ಅವರು ‘ವಿದಾಮುಯಾರ್ಚಿ’ ಸಿನಿಮಾದ ಚಿತ್ರೀಕರಣದ ವೇಳೆ ಕಾರು ಅಪಘಾತ ಮಾಡಿಕೊಂಡಿದ್ದು ಸುದ್ದಿ ಆಗಿತ್ತು. ಈಗ ಆ ಅಪಘಾತದ ವಿಡಿಯೋ ಲಭ್ಯವಾಗಿದೆ.

ಅಜಿತ್​ ಕುಮಾರ್​ ಅವರು ಚಿತ್ರೀಕರಣದ ಸಂದರ್ಭದಲ್ಲಿ ಹೇಗೆ ಅಪಘಾತಕ್ಕೀಡಾದರು ಎಂಬುದನ್ನು ವಿವರಿಸುವಂತಹ ವಿಡಿಯೋವನ್ನು ಇಂದು ಅವರ ಮ್ಯಾನೇಜರ್ ಸುರೇಶ್ ಚಂದ್ರ ಬಹಿರಂಗಪಡಿಸಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಈ ವಿಡಿಯೋ ವೈರಲ್​ ಆಗಿದೆ. ಅಭಿಮಾನಿಗಳು ಈ ವಿಡಿಯೋ ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅಜಿತ್​ ಕುಮಾರ್​ ಅವರ ಉತ್ಸಾಹ ಮತ್ತು ಸಾಹಸ ಗುಣವನ್ನು ಕಂಡು ಫ್ಯಾನ್ಸ್​ ವಾವ್​ ಎನ್ನುತ್ತಿದ್ದಾರೆ. ನಟರಾದ ಅಜಿತ್ ಕುಮಾರ್ ಮತ್ತು ಆರವ್ ಅವರು ಕಾರ್ ಚೇಸ್ ಸೀಕ್ವೆನ್ಸ್‌ಗಾಗಿ ಚಿತ್ರೀಕರಣ ಮಾಡುತ್ತಿದ್ದರು. ಆ ಸಂದರ್ಭದ ವಿಡಿಯೋ ಇಲ್ಲಿದೆ. ಅಜಿತ್​ ಕುಮಾರ್​ ಅವರು ಓಡಿಸುತ್ತಿದ್ದ ಕಾರು ಸ್ಕಿಡ್​ ಆಯಿತು. ಭಾರಿ ದುರಂತ ಆಗುವುದನ್ನು ಅಜಿತ್​ ಅವರು ಸಾಧ್ಯವಾದಷ್ಟು ತಪ್ಪಿಸಿದರು. ಈ ಅಪಘಾತದಿಂದ ಇಬ್ಬರು ನಟರು ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.

‘ವಿದಾಮುಯಾರ್ಚಿ’ ಸಿನಿಮಾದ ತಾರಾಗಣದಲ್ಲಿ ಅಜಿತ್​ ಕುಮಾರ್​ ಜೊತೆ ತ್ರಿಷಾ, ಅರ್ಜುನ್, ಆರವ್, ರೆಜಿನಾ ಕಸ್ಸಂದ್ರ ಮತ್ತು ಅನೇಕರು ನಟಿಸುತ್ತಿದ್ದಾರೆ. ಅನಿರುದ್ಧ್ ರವಿಚಂದರ್​ ಅವರು ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಇದು ಆ್ಯಕ್ಷನ್-ಥ್ರಿಲ್ಲರ್ ಸಿನಿಮಾ ಆಗಿದ್ದು, ಅಭಿಮಾನಿಗಳಲ್ಲಿ ನಿರೀಕ್ಷೆ ಮೂಡಿಸಿದೆ. ಈ ಚಿತ್ರದ ಚಿತ್ರೀಕರಣವನ್ನು 2023ರ ಅಕ್ಟೋಬರ್​ನಿಂದ ಅಜೆರ್ಬೈಜಾನ್‌ನಲ್ಲಿ ನಡೆಸುತ್ತಿದ್ದಾರೆ. ಈ ಪ್ರಾಜೆಕ್ಟ್​ನ ಅಪ್​ಡೇಟ್​ ತಿಳಿಯಲು ಫ್ಯಾನ್ಸ್​ ಕಾದಿದ್ದರು. ಈ ಸಮಯಕ್ಕೆ ಸರಿಯಾಗಿ ಅಜಿತ್​ ಕುಮಾರ್​ ಅವರ ಕಾರು ಅಪಘಾತದ ವಿಡಿಯೋ ವೈರಲ್​ ಆಗಿದೆ.

LEAVE A REPLY

Please enter your comment!
Please enter your name here