ಮಂಗಳೂರು: ಇಲ್ಲಿನ ಬಂದರು ಪ್ರದೇಶದ ಜಿಎಂ ರಸ್ತೆಯಲ್ಲಿರುವ ಹೆಂಚಿನ ಅಂತಸ್ತಿನ ಹಳೆಯ ಮನೆಯೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದ ಘಟನೆ ಶನಿವಾರ (ಎ.06) ನಡೆದಿದೆ.
ಎ.06ರಂದು 11:30 ಸುಮಾರಿಗೆ ಸಂಶುದ್ದೀನ್ ಎಂಬವರ ಮನೆಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಮನೆಯಲ್ಲಿದ್ದವರು ಕೂಡಲೇ ಹೊರಗೆ ಬಂದ ಕಾರಣ ಘಟನೆಯಲ್ಲಿ ಯಾರಿಗೂ ಹಾನಿಯಾಗಿಲ್ಲ. ಘಟನೆಗೆ ಶಾರ್ಟ್ ಸರ್ಕ್ಯೂಟ್ ಕಾರಣವೆನ್ನಲಾಗಿದೆ.ಶಾರ್ಟ್ 20 ಅದಿಕ ಮನೆಯಲ್ಲಿ ಮನೆಮಂದಿ ವಾಸವಾಗಿದ್ದು ಯಾವುದೇ ಪ್ರಾಣಪಾಯವಾಗಿಲ್ಲ ಎಂದು ತಿಳಿದುಬಂದಿದೆ.ಮನೆಯಲ್ಲಿದ್ದ ಸುಮಾರು ರೂ.10 ಲಕ್ಷದವರೆಗೆ ಮನೆ ಸೊತ್ತು ಬೆಂಕಿಗಾಹುತಿಯಾಗಿದೆ ಎನ್ನಲಾಗಿದೆ. ಅಗ್ನಿಶಾಮಕ ದಳದವರು ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದ್ದಾರೆ.