ವಾಲಿ ಬಿದ್ದ ರಥ-ಹುಸ್ಕೂರಿನ ಮದ್ದೂರಮ್ಮ ಜಾತ್ರೆಯಲ್ಲಿ ನಡೆದ ಅವಘಡ

ಬೆಂಗಳೂರು/ಮಂಗಳೂರು: ಆನೇಕಲ್ ತಾಲೂಕಿನ ಹುಸ್ಕೂರಿನ ಮದ್ದೂರಮ್ಮ ಜಾತ್ರೆಯ ಸಂರ್ಭದಲ್ಲಿ ಸುಮಾರು 120 ಅಡಿ ಎತ್ತರದ ತೇರು ಕುಸಿದು ಬಿದ್ದ ಘಟನೆ ಏ.6ರಂದು ನಡೆದಿದೆ.  ಸುಮಾರು 70 ಎತ್ತುಗಳು ಹಾಗೂ ಟ್ರ್ಯಾಕ್ಟರ್ ಮೂಲಕ ಆನೇಕಲ್ ತಾಲೂಕಿನ ಹೀಲಲಿಗೆಯಿಂದ ಹುಸ್ಕೂರಿನ ಮದ್ದೂರಮ್ಮ ದೇವಸ್ಥಾನಕ್ಕೆ ತೇರನ್ನು ಎಳೆದುಕೊಂಡು ಹೋಗಲಾಗುತ್ತಿತ್ತು. ಆದರೆ, ಹೀಲಲಿಗೆ ಗ್ರಾಮದ ಬಳಿ ರಥ ವಾಲಿ ಬಿದ್ದಿದೆ.

ಘಟನೆಗೆ ರಥವು ಹೆಚ್ಚು ಎತ್ತರದಲ್ಲಿದ್ದ ಕಾರಣ ನಿಯಂತ್ರಣ ತಪ್ಪಿ ತೇರು ಕುಸಿದು ಬಿದ್ದಿದೆ ಎನ್ನಲಾಗುತ್ತಿದೆ. ಈ ಮೊದಲು 2018ರಲ್ಲಿಯೂ ಮದ್ದೂರಮ್ಮ ಜಾತ್ರೆಯಲ್ಲಿ ತೇರು ಕುಸಿದು ಬಿದ್ದಿತ್ತು.ತೇರನ್ನು ಎಳೆದುಕೊಂಡು ಮುಂದೆ ಸಾಗುತ್ತಿದ್ದಂತೆ ತುದಿಯ ಭಾಗ ಅಲ್ಲಾಡಿದ್ದು, ಇದು ನಿಯಂತ್ರಣಕ್ಕೆ ಬಾರದೇ ಸೀದಾ ಎಡಭಾಗಕ್ಕೆ ವಾಲಿಕೊಂಡು ನೆಲಕ್ಕೆ ಉರುಳಿದೆ. ತೇರು ಬೀಳುವುದನ್ನು ನೋಡಿ ಎಚ್ಚೆತ್ತುಕೊಂಡ ಜನರು ಅಲ್ಲಿಂದ ಎಲ್ಲರೂ ಓಡಿ ಹೋಗಿದ್ದಾರೆ. ಆದ್ದರಿಂದ ಅಲ್ಲಿದ್ದ ಜನರಿಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಮದ್ದೂರಮ್ಮನ ತೇರನ್ನು ಸ್ಥಳೀಯರು ಕುರ್ಜು ಎಂತಲೂ ಕರೆಯುತ್ತಾರೆ.

 

LEAVE A REPLY

Please enter your comment!
Please enter your name here