ಪಿಯುಸಿ ಫಲಿತಾಂಶ-ದ.ಕ ಪ್ರಥಮ, ಉಡುಪಿ ದ್ವಿತೀಯ

ಮಂಗಳೂರು: ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ 2024 ಪ್ರಕಟವಾಗಿದೆ. 5,52,690 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಉತ್ತೀರ್ಣ ಪ್ರಮಾಣ ಶೇಕಡ 81.15 ದಾಖಲಾಗಿದೆ. ಜಿಲ್ಲಾವಾರು ಉತ್ತೀರ್ಣ ಪ್ರಮಾಣದಲ್ಲಿ ದ.ಕ 97.37% ಫಲಿತಾಂಶದೊಂದಿಗೆ ಪ್ರಥಮ ಸ್ಥಾನ, ಉಡುಪಿ 96.80% ಫಲಿತಾಂಶದೊಂದಿಗೆ ದ್ವಿತೀಯ ಸ್ಥಾನ, ವಿಜಯಪುರ ಜಿಲ್ಲೆ ಮೂರನೇ ಸ್ಥಾನದಲ್ಲಿದೆ. ಗದಗ ಜಿಲ್ಲೆ 72.86% ಫಲಿತಾಂಶದೊಂದಿಗೆ ಕಡೆಯ ಸ್ಥಾನದಲ್ಲಿ ಇದೆ.

ವಿಜ್ಞಾನ ವಿಭಾಗದಲ್ಲಿ 598 ಅಂಕ ಪಡೆದ ವಿದ್ಯಾಲಕ್ಷ್ಮಿ, ಕಲಾ ವಿಭಾಗದಲ್ಲಿ ಬೆಂಗಳೂರಿನ ಮೇಧಾ.ಡಿ. ರಾಜ್ಯಕ್ಕೆ ಟಾಪರ್‌ಗಳು. ಇನ್ನು, ನಗರ ಪ್ರದೇಶದ ಫಲಿತಾಂಶ ಪ್ರಮಾಣ ಶೇ 81.10, ಗ್ರಾಮಾಂತರದ ಫಲಿತಾಂಶ ಪ್ರಮಾಣ ಶೇ 81.31 ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಎನ್‌.ಮಂಜುಶ್ರೀ ತಿಳಿಸಿದ್ದಾರೆ. ಮಲ್ಲೇಶ್ವರಂನಲ್ಲಿರುವ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯ ಕಚೇರಿಯಲ್ಲಿ ಮಂಡಳಿ ಅಧ್ಯಕ್ಷೆ ಎನ್‌.ಮಂಜುಶ್ರೀ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದ್ದಾರೆ.

6.98 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರೆ, 3.3 ಲಕ್ಷ ಬಾಲಕರು, 3.6 ಲಕ್ಷ ಬಾಲಕಿಯರು ತೇರ್ಗಡೆಯಾಗಿದ್ದಾರೆ. ಈ ವರ್ಷವೂ ಬಾಲಕಿಯರದೇ ಮೇಲುಗೈ ಕಂಡುಬಂದಿದೆ. ಇನ್ನು, ಕಲಾ ವಿಭಾಗದಲ್ಲಿ ಶೇಕಡ 68.36, ವಿಜ್ಞಾನ ವಿಭಾಗದಲ್ಲಿ 89.96, ವಾಣಿಜ್ಯ ವಿಭಾಗದಲ್ಲಿ ಶೇಕಡ 80.94 ಉತ್ತೀರ್ಣರಾಗಿದ್ದಾರೆ.

LEAVE A REPLY

Please enter your comment!
Please enter your name here