



ಕಾಸರಗೋಡು: ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿ ತಾಯಿ ಆತ್ಮಹತ್ಯೆಗೆ ಶರಣಾದ ಘಟನೆ ಕಾಸರಗೋಡಿನ ಚಿಮೇನಿ ಚೆಂಬ್ರಕಾನದಲ್ಲಿ ನಡೆದಿದೆ.







ರಂಜಿತ್ ಅವರ ಪತ್ನಿ ಸಜೀನಾ (34), ಮಕ್ಕಳಾದ ಗೌತಮ್( 9) ಮತ್ತು ತೇಜಸ್ (6) ಮೃತ ದುರ್ದೈವಿಗಳಾಗಿದ್ದಾರೆ. ಇವರು ಚೆಂಬ್ರಕಾನ್ ನಿವಾಸಿಗಳೆಂದು ತಿಳಿದುಬಂದಿದೆ. ಎ.9ರ ಮಂಗಳವಾರ ಮಧ್ಯಾಹ್ನ ಈ ಘಟನೆ ಬೆಳಕಿಗೆ ಬಂದಿದ್ದು ಮಕ್ಕಳು ವಿಷ ಸೇವಿಸಿ ಮೃತಪಟ್ಟಿದ್ದು, ತಾಯಿ ಸಜೀನಾ ನೇಣು ಬಿಗಿದುಕೊಂಡು ಕೈ ನರವನ್ನು ಕತ್ತರಿಸಿಕೊಂಡು ಸಾವನ್ನಪ್ಪಿದ್ದಾರೆ. ಸಜೀನಾ ಪೆರಿಂಗೋ ವಯಕ್ಕರ ಪಂಚಾಯತ್ ಕಚೇರಿಯಲ್ಲಿ ಗುಮಾಸ್ತರಾಗಿ ಕೆಲಸ ಮಾಡುತ್ತಿದ್ದರು ಎಂದು ಮೂಲಗಳು ತಿಳಿಸಿವೆ. ಮಾಹಿತಿ ಪಡೆದ ಚಿಮೇನಿ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದಾರೆ. ಈ ಕೃತ್ಯಕ್ಕೆ ಕಾರಣ ತಿಳಿದು ಬಂದಿಲ್ಲ.















