ಪ್ರಧಾನಿ ಆಗಮನ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ-“ಗೋ ಬ್ಯಾಕ್ ಮೋದಿ” ಘೋಷಣೆ

ಮಂಗಳೂರು: ಕೇಂದ್ರ ಸರಕಾರ ರಾಜ್ಯಕ್ಕೆ ನೀಡಬೇಕಾದ ತೆರಿಗೆಯಲ್ಲಿ ವಂಚನೆ, ಜಿ.ಎಸ್.ಟಿಯಲ್ಲಿ ಮೋಸ ಮಾಡಿದೆ. ಪ್ರವಾಹ ಮತ್ತು ಬರ ಪರಿಹಾರದ ಸಹಾಯನುಧಾನವನ್ನು ನೀಡದೇ ವಂಚನೆ ಮಾಡಿದೆ ಎಂದು ಆರೋಪಿಸಿ, ಮಂಗಳೂರಿಗೆ ಪ್ರಧಾನಿ ಮೋದಿಯವರು ಆಗಮಿಸುವುದನ್ನು ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಶನಿವಾರ ಮಂಗಳೂರಿನ ಕ್ಲಾಕ್ ಟವರ್ ಬಳಿ ಪ್ರತಿಭಟನೆ ನಡೆಸಿದರು. “ಗೋ ಬ್ಯಾಕ್ ಮೋದಿ” ಘೋಷಣೆ ಕೂಗಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ ಮಾತನಾಡಿ, ತೆರಿಗೆ ಪಾಲು ಕಡಿತ ಮಾಡಿರುವುದರಿಂದ ರಾಜ್ಯಕ್ಕೆ 45,000 ಕೋ.ರೂ ನಷ್ಟವಾಗಿದೆ. ಬರ, ನೆರೆ, ಕೋವಿಡ್, ಇತರ ತೊಂದರೆಯಾದಾಗ ರಾಜ್ಯಕ್ಕೆ ಮೋದಿಯವರು ಬಂದಿಲ್ಲ. ಈಗ ಯಾಕೆ ಬರುತ್ತಿದ್ದೀರಿ? ಮೋದಿ ಬರುವುದು ರಾಜಕೀಯಕ್ಕಾಗಿ ಹೊರತು ರಾಜ್ಯದ ಜನರ ಹಿತಕ್ಕಾಗಿ ಅಲ್ಲ ಎಂದು ಹೇಳಿದರು. ವಿಧಾನ ಪರಿಷತ್ ಸದಸ್ಯ, ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here