ಮಂಗಳೂರು: ಮುಂಬರುವ ಲೋಕಸಭಾ ಚುನಾವಣೆಗೆ ಪ್ರಧಾನಿ ನರೇಂದ್ರ ಮೋದಿ ಬಿಜೆಪಿಯ ಪ್ರಣಾಳಿಕೆ ಸಂಕಲ್ಪ ಪತ್ರವನ್ನು ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಜನರಿಗೆ ಹಲವು ರೀತಿಯ ಭರವಸೆಗಳನ್ನು ನೀಡಿದ್ದಾರೆ. ಬಿಜೆಪಿಯು ಸಂಕಲ್ಪ ಪತ್ರ ಹೆಸರಿನಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದೆ.
ಬಿಜೆಪಿ ಯಾವಾಗಲೂ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುತ್ತದೆ, ಸಂಕಲ್ಪ ಪತ್ರ ನಮ್ಮ ಸಮರ್ಪಣೆ ಮುಂದಕ್ಕೆ ಕೊಂಡೊಯ್ಯುವ ಸಾಧನ, ಪ್ರತಿ ಚುನಾವಣೆ ಬಂದಾಗ ನಾವು ನಮ್ಮ ವಿಚಾರ ಜನರಿಗೆ ತಿಳಿಸುತ್ತೇವೆ, ನಂತರ ಆ ವಿಚಾರವನ್ನ ಅನುಷ್ಠಾನ ಮಾಡಿ ಮುಂದುವರಿಸುತ್ತೇವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹೇಳಿದ್ದಾರೆ.
ಮುಂದಿನ 5 ವರ್ಷಗಳ ಕಾಲ ಉಚಿತ ಪಡಿತರ ಯೋಜನೆ ಮುಂದುವರಿಯಲಿದೆ ಎಂಬುದು ಮೋದಿ ಗ್ಯಾರಂಟಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಈ ನಿರ್ಣಯ ಪತ್ರವು ಅಭಿವೃದ್ಧಿ ಹೊಂದಿದ ಭಾರತದ ಎಲ್ಲಾ 4 ಬಲವಾದ ಸ್ತಂಭಗಳನ್ನು – ಯುವ ಶಕ್ತಿ, ಮಹಿಳಾ ಶಕ್ತಿ, ಬಡವರು ಮತ್ತು ರೈತರನ್ನು ಸಶಕ್ತಗೊಳಿಸುತ್ತದೆ. ನಮ್ಮ ಗಮನವು ಜೀವನದ ಘನತೆ, ಜೀವನದ ಗುಣಮಟ್ಟ ಮತ್ತು ಹೂಡಿಕೆಯ ಮೂಲಕ ಉದ್ಯೋಗಗಳ ಮೇಲೆ ಕೇಂದ್ರೀಕೃತವಾಗಿದೆ. ಬಿಜೆಪಿ ಪ್ರತಿ ಭರವಸೆಯನ್ನು ಜಾರಿಗೆ ತಂದಿದೆ-ಮೋದಿ ಕಳೆದ 10 ವರ್ಷಗಳಲ್ಲಿ ಬಿಜೆಪಿ ತನ್ನ ಪ್ರಣಾಳಿಕೆಯ ಪ್ರತಿಯೊಂದು ಅಂಶವನ್ನು ಗ್ಯಾರಂಟಿಯಾಗಿ ಜಾರಿಗೆ ತಂದಿದ್ದೇವೆ ಎಂದವರು ಹೇಳಿದ್ದಾರೆ. ವಯಸ್ಸಾಗುತ್ತಿದ್ದಂತೆ ಅನೇಕ ಆರೋಗ್ಯ ಸಂಬಂಧಿ ಸಮಸ್ಯೆಗಳು ಕಾಡುತ್ತವೆ, ಇನ್ನುಮುಂದೆ 70 ವರ್ಷ ಮೇಲ್ಪಟ್ಟವರು ಕೂಡ ಆಯುಷ್ಮಾನ್ ಭಾರತ ಯೋಜನೆಯ ಭಾಗವಾಗಿರುತ್ತಾರೆ ಎಂದು ಪ್ರಧಾನಿ ಮೋದಿ ಅಭಯ ನೀಡಿದ್ದಾರೆ.
ಬಿಜೆಪಿಯ ಪ್ರಣಾಳಿಕೆಯ ಪ್ರಮುಖ ಅಂಶಗಳು ಇಲ್ಲಿದೆ
- ಬಡವರಿಗೆ 3 ಕೋಟಿ ಮನೆಗಳ ನಿರ್ಮಾಣ
- ಪೈಪ್‌ಲೈನ್ ಮೂಲಕ ಅಡುಗೆ ಅನಿಲ ಪೂರೈಕೆ
- ಕೋಟ್ಯಂತರ ಕುಟುಂಬಗಳಿಗೆ ಸೋಲಾರ್ ಮೂಲಕ ಉಚಿತವಾಗಿ ವಿದ್ಯುತ್ ಪೂರೈಕೆ
- ಮುದ್ರಾ ಯೋಜನೆ ಅಡಿಯಲ್ಲಿ ಸಿಗುವ ಸಾಲದ ಮೊತ್ತ 20 ಲಕ್ಷ ರೂ.ಗೆ ಏರಿಕೆ
- ಅಮೃತ್ ಭಾರತ್, ವಂದೇ ಭಾರತ್ ರೈಲುಗಳ ಸಂಖ್ಯೆ ಹೆಚ್ಚಳ
- ಮಂಗಳಮುಖಿಯರಿಗೂ ಆಯುಷ್ಮಾನ್ ಭಾರತ್ ಯೋಜನೆ ಅಡಿ ಉಚಿತ ಚಿಕಿತ್ಸೆ
- 10 ಕೋಟಿ ಮಹಿಳೆಯರಿಗೆ ಉದ್ಯೋಗ, ಉದ್ಯಮ ಕುರಿತು ಕೌಶಲ ತರಬೇತಿ
- ಮೂರು ಕೋಟಿ ಮಹಿಳೆಯರಿಗೆ ಲಕ್‌ಪತಿ ದೀದಿ ಯೋಜನೆಯ ಗ್ಯಾರಂಟಿ
- ರೈತರಿಗೆ ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ಹಣ ವರ್ಗಾವಣೆ ಮುಂದುವರಿಕೆ
- ದೇಶಾದ್ಯಂತ ಡೇರಿ ಸಹಕಾರ ಸಂಘಗಳನ್ನು ಹೆಚ್ಚಿಸಲಾಗುವುದು
- ಕ್ರೀಡೆಯಲ್ಲಿ ಸ್ತ್ರೀಯರ ಪ್ರಾತಿನಿಧ್ಯ ಹೆಚ್ಚಿಸಲು ಹೊಸ ಯೋಜನೆ
- ತಮಿಳು ಭಾಷೆಯ ವೈಶಿಷ್ಟ್ಯ ಸಾರಲು ಆದ್ಯತೆ
- ಉದ್ಯೋಗ ಖಾತರಿ
- 2036 ರಲ್ಲಿ ಒಲಿಂಪಿಕ್ಸ್ ಆತಿಥ್ಯ
- 3 ಕೋಟಿ ಲಕ್‌ಪತಿ ದೀದಿ ಮಾಡುವ ಗುರಿ
- ಮಹಿಳಾ ಮೀಸಲಾತಿ ಜಾರಿಗೊಳಿಸುವ ಭರವಸೆ
- ಕೃಷಿ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದು
- ಮೀನುಗಾರರಿಗೆ ಯೋಜನೆ
- ಇ-ಶ್ರಮ್ ಮೂಲಕ ಕಲ್ಯಾಣ ಯೋಜನೆಯ ಪ್ರಯೋಜನ
- 2025 ಬುಡಕಟ್ಟು ಹೆಮ್ಮೆಯ ವರ್ಷ
- ಪ್ರತಿ ಕ್ಷೇತ್ರದಲ್ಲೂ ಒಬಿಸಿ-ಎಸ್‌ಸಿ-ಎಸ್‌ಟಿಗೆ ಗೌರವ
- ಜಾಗತಿಕ ಉತ್ಪಾದನಾ ಕೇಂದ್ರ ರಚಿಸಲು ಸಿದ್ಧತೆ
- ಪ್ರಪಂಚದಾದ್ಯಂತ ರಾಮಾಯಣ ಹಬ್ಬ
- ಅಯೋಧ್ಯೆಯ ಅಭಿವೃದ್ಧಿ
- ಒಂದು ರಾಷ್ಟ್ರ, ಒಂದು ಚುನಾವಣೆ
- ಈಶಾನ್ಯ ಭಾರತದ ಅಭಿವೃದ್ಧಿ
- AI, ಸೆಮಿಕಂಡಕ್ಟರ್ ಮತ್ತು ಬಾಹ್ಯಾಕಾಶ ವಲಯದಲ್ಲಿ ಅಭಿವೃದ್ಧಿ