ಬಾಹ್ಯಾಕಾಶ ಪ್ರವಾಸಕ್ಕೆ ಆಯ್ಕೆಯಾದ ಮೊದಲ ಭಾರತೀಯ ಗೋಪಿಚಂದ್ ತೋಟಕ್ಕುರ

ಮಂಗಳೂರು (ವಾಷಿಂಗ್ಟನ್‌): ಅಮೆಜಾನ್‌ ಸಂಸ್ಥಾಪಕ ಜೆಫ್‌ ಬೆಜೊಸ್‌ ಅವರು ಆರಂಭಿಸಿರುವ ಬ್ಲ್ಯೂ ಆರಿಜಿನ್‌ನ ಎನ್‌ಎಸ್‌– 25 ಎಂಬ ಬಾಹ್ಯಾಕಾಶ ಪ್ರವಾಸ ಕಾರ್ಯಕ್ರಮಕ್ಕೆ ಆಯ್ಕೆಯಾದ ಮೊದಲ ಭಾರತೀಯರೆಂಬ ಹೆಗ್ಗಳಿಕೆಗೆ  ಅವರು ಪಾತ್ರರಾಗಿದ್ದಾರೆ.‘ಉದ್ಯಮಿ ಹಾಗೂ ಪೈಲಟ್‌ ಸಹ ಆಗಿರುವ ಗೋಪಿ ಅವರು ಬಾಹ್ಯಾಕಾಶ ಕಾರ್ಯಕ್ರಮಕ್ಕೆ ಆಯ್ಕೆಯಾದ ಆರು ಮಂದಿ ಪೈಕಿ ಒಬ್ಬರಾಗಿದ್ದಾರೆ’ ಎಂದು ಅಂತರಿಕ್ಷ ಸಂಸ್ಥೆ ತಿಳಿಸಿದೆ.

 

ಇವರು ಆಂಧ್ರ ಮೂಲದವರಾಗಿದ್ದು ಅಮೆರಿಕದಲ್ಲಿ ಪ್ರಿಸರ್ವ್ ಲೈಫ್ ಕಾರ್ಪ್ ಎಂಬ ಉದ್ಯಮ ನಡೆಸುತ್ತಿದ್ದಾರೆ.‘ಪ್ರವಾಸಿಗರನ್ನು ಹೊತ್ತ ವಿಮಾನವು ಬಾಹ್ಯಾಕಾಶಕ್ಕೆ ಯಾವಾಗ ತೆರಳಲಿದೆ ಎಂಬ ದಿನಾಂಕವನ್ನು ಇನ್ನೂ ಘೋಷಿಸಬೇಕಿದೆ’ ಎಂದು ಹೇಳಿದೆ.

1984ರಲ್ಲಿ ಭಾರತೀಯ ಸೇನೆಯ ವಿಂಗ್ ಕಮಾಂಡರ್ ರಾಕೇಶ್ ಶರ್ಮಾ ಅವರ ನಂತರ ಬಾಹ್ಯಾಕಾಶಕ್ಕೆ ತೆರಳುವ ಸಾಹಸ ಮಾಡುತ್ತಿರುವ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ.

‘ನ್ಯೂ ಶೆಪರ್ಡ್ ಉಪ ಕಕ್ಷೆ ಉಡಾವಣಾ ವಾಹನದಲ್ಲಿ ಬಾಹ್ಯಾಕಾಶಕ್ಕೆ ತೆರಳುವ ಈ ಕಾರ್ಯಕ್ರಮ ಏಳನೇಯದ್ದಾಗಿದೆ ಮತ್ತು ಇತಿಹಾಸದಲ್ಲೇ 25ನೇ ಪ್ರವಾಸವಾಗಿದೆ. ಈ ಕಾರ್ಯಕ್ರಮದ ಮೂಲಕ ಭೂಮಿ ವಾತಾವರಣ ಮತ್ತು ಬಾಹ್ಯಾಕಾಶ ನಡುವಿನ ಸಾಂಪ್ರಾದಾಯಿಕ ಗಡಿ ಎಂದೇ ನಂಬಲಾದ ಕರ್ಮನ್‌ ಗೆರೆಯನ್ನು ಇದುವರಗೆ 31 ಜನರು ದಾಟಿದ್ದಾರೆ’ ಎಂದು ಸಂಸ್ಥೆ ಹೇಳಿದೆ.

ಅಂತರಿಕ್ಷ ಪ್ರವಾಸಕ್ಕಾಗಿ ಬ್ಲ್ಯೂ ಆರಿಜಿನ್‌ನವರು ತಯಾರು ಮಾಡಿರುವ ಮತ್ತು ಮರುಬಳಕೆ ಮಾಡಬಹುದಾದ ಉಡಾವಣಾ ವಾಹನವೇ ಈ ನ್ಯೂ ಶೆಪರ್ಡ್.

LEAVE A REPLY

Please enter your comment!
Please enter your name here