ಮಂಗಳೂರಿನಲ್ಲಿ ಪ್ರಧಾನಿ ರೋಡ್‌ ಶೋ – ದಿ.ಪ್ರವೀಣ್‌ ನೆಟ್ಟಾರು ತಾಯಿಯಿಂದ ಪ್ರಧಾನಿ ಭೇಟಿ

ಮಂಗಳೂರು/ಪುತ್ತೂರು: ದ.ಕ ಮತ್ತು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪರ ಎ.14ರಂದು ಮಂಗಳೂರಿನಲ್ಲಿ ನಡೆದ ಪ್ರಧಾನಿ ಮೋದಿಯವರ ರೋಡ್‌ ಶೋ ಕಾರ್ಯಕ್ರಮಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಯವರನ್ನು ಬಜಪೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸುವ ಗಣ್ಯರ ಸಾಲಿನಲ್ಲಿ ದಿ.ಪ್ರವೀಣ್‌ ನೆಟ್ಟಾರು ತಾಯಿ ಇದ್ದಿದ್ದು, ಹಲವರ ಆಶ್ಚರ್ಯಕ್ಕೆ ಕಾರಣವಾಗಿದೆ.

ಭಾರತೀಯ ಜನತಾ ಪಾರ್ಟಿ ವತಿಯಿಂದ ಬಿಜೆಪಿ ಕಾರ್ಯಕರ್ತ ದಿ.ಪ್ರವೀಣ್‌ ನೆಟ್ಟಾರು ಅವರ ತಾಯಿಗೆ ಪ್ರಧಾನಿ ಭೇಟಿ ಮಾಡಲು ಅವಕಾಶ ಕಲ್ಪಿಸಲಾಗಿದ್ದು, ಪ್ರಧಾನಿ ಭೇಟಿ ವೇಳೆ ಗಣ್ಯರ ಸಾಲಿನಲ್ಲಿದ್ದ ಪ್ರವೀಣ್‌ ನೆಟ್ಟಾರು ತಾಯಿ ಕೈ ಮುಗಿದು ಪ್ರಧಾನಿಯವರನ್ನು ಸ್ವಾಗತಿಸಿದರು.

LEAVE A REPLY

Please enter your comment!
Please enter your name here