ಮಂಗಳೂರು/ಹಾಸನ : ಕಳೆದ ಮೂರು ದಿನಗಳಿಂದ ಹುಲ್ಲೇಮಕ್ಕಿ ಗ್ರಾಮದಲ್ಲಿ ಕಾಡಾನೆಗಳು ಕಾದಾಟಕ್ಕಿಳಿದಿದೆ. ಕಾಡಾನೆಗಳ ಕಾದಾಟ ಕಂಡು ಗ್ರಾಮಸ್ಥರು ಭಯಭೀತರಾಗಿದ್ದಾರೆ. ಕಾಡಾನೆಗಳ ಕಾದಾಟ ಬಿಡಿಸಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಡಬೇಕಾಯಿತು. ಪಟಾಕಿ ಸಿಡಿಸಿ ಕಾಡಾನೆಗಳನ್ನು ಇಟಿಎಫ್ ಸಿಬ್ಬಂದಿಗಳು ಹಿಮ್ಮೆಟ್ಟಿಸಿದ್ದಾರೆ.
ಬೇಲೂರು ತಾಲ್ಲೂಕಿನ ಹುಲ್ಲೇಮಕ್ಕಿ ಗ್ರಾಮದಲ್ಲಿ ಕಾಡಾನೆಯ ಈ ರೋಚಕ ಕದನ ನಡೆದಿದೆ. ನರಹಂತಕ ಕರಡಿ ಹಾಗೂ ಕ್ಯಾಪ್ಟನ್ ಹೆಸರಿನ ಆನೆಗಳ ನಡುವೆ ಕಾಳಗ ನಡೆದಿದೆ. ಗ್ರಾಮದ ಮನೆ ಮುಂದೆಯೇ ಕಾಡಾನೆಗಳು ರೋಚಕ ಕಾದಾಟ ನಡೆಸಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ. ಆನೆಗಳ ಕಾದಾಟವನ್ನು ಕಣ್ಣಾರೆ ಕಂಡ ಗ್ರಾಮಸ್ಥರು ತಮ್ಮ ಮೊಬೈಲ್‌ಗಳಲ್ಲಿಯೂ ದೃಶ್ಯ ಸೆರೆ ಹಿಡಿದಿದ್ದು, ಮದ ಗಜಗಳ ಕಾದಾಟ ವೈರಲ್ ಆಗಿದೆ.
ವೀಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ: