“ನಿಕುಲು ಕೊರ್ಲೆ, ಅಕುಲು ಎಂಚಿನ ಮಲ್ಪೆರ್‌ ಯಾನ್‌ ತೂಪೆ” ಎಂದು ಕಾರ್ಯಕರ್ತರಿಗೆ ಹೇಳಿದ ಶಾಸಕ ವೇದವ್ಯಾಸ್‌ ಕಾಮತ್‌ ವರ್ತನೆ ನೋವು ತಂದಿದೆ-ಸಾಯಿ ಮಂದಿರದ ಆಡಳಿತ ಮೊಕ್ತೇಸರ ವಿಶ್ವಾಸ್ ಕುಮಾರ್ ದಾಸ್

ಮಂಗಳೂರು: ಚುನಾವಣೆಯಲ್ಲಿ ಸ್ಪರ್ಧೆ ಇದ್ದದ್ದೆ. ಅವರವರು ಮಾಡಿದ  ಕೆಲಸ ಮುಂದಿಟ್ಟುಕೊಂಡು ಮತಯಾಚನೆ ಮಾಡಬೇಕು. ಧಾರ್ಮಿಕ ಕ್ಷೇತ್ರದಲ್ಲಿ ಮತಯಾಚನೆ ಸರಿಯಲ್ಲ ಎಂದು ಕಾಂಗ್ರೆಸ್‌ ನ ಜಿಲ್ಲಾ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್ ಹೇಳಿದ್ದಾರೆ.

ಚಿಲಿಂಬಿಯ ಸಾಯಿ ಮಂದಿರದ ಬಳಿ ಶಾಸಕ ವೇದವ್ಯಾಸ್‌ ಕಾಮತ್ ಅವರೊಂದಿಗೆ ಮತಯಾಚನೆ ವಿಚಾರಕ್ಕೆ ಸಂಬಂಧಪಟ್ಟಂತೆ ನಡೆದ ವಾಗ್ವಾದದ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ , ಸಾಯಿ ಮಂದಿರದ ಆಡಳಿತ ಮೊಕ್ತೇಸರರು ಆಗಿರುವ ವಿಶ್ವಾಸ್ ಕುಮಾರ್ ದಾಸ್ ಕಳೆದ ಎರಡು ದಿನಗಳಿಂದ ಇಲ್ಲಿ ರಾಮನವಮಿ ಉತ್ಸವ ಆಚರಿಸಲಾಗುತ್ತಿದೆ. ಮಧ್ಯಾಹ್ನದ ಊಟದ ವೇಳೆ ದೇವಸ್ಥಾನದ ದ್ವಾರದ ಬಳಿಗೆ ತನ್ನ ಬೆಂಬಲಿಗರೊಂದಿಗೆ ಬಂದ ಶಾಸಕ ವೇದವ್ಯಾಸ್‌ ಕಾಮತ್‌ ಭಕ್ತಾದಿಗಳಿಗೆ ಕರಪತ್ರ ಹಂಚಿ ಬಿಜೆಪಿ ಪರ ಮತಯಾಚನೆ ಮಾಡುತ್ತಿದ್ದರು. ಈ ದೇವಸ್ಥಾನದಲ್ಲಿ ಇದುವರೆಗೆ ಯಾವುದೇ ಪಕ್ಷದ ರಾಜಕೀಯಕ್ಕೆ ಅವಕಾಶ ನೀಡಿಲ್ಲ. ಇಲ್ಲಿ ಪ್ರಚಾರ ಮಾಡಬಾರದು ಎಂದು ಹೇಳಿದೆ.  ಇದು ಸಾರ್ವಜನಿಕ ಜಾಗ. ಈ ಜಾಗ ನಿಮ್ಮ ಹೆಸರಲ್ಲಿದೆಯೇ ಎಂದೆಲ್ಲ ಒರಟಾಗಿ ಮಾತನಾಡಿ ನಮ್ಮ ಎಲ್ಲಾ ಮಾತಿಗೆ ಬೆಲೆ ನೀಡದೆ, ನೀವು ಏನು ಮಾಡುತ್ತೀರಿ ಮಾಡಿ ಎಂದು ಮಾಡಿದ ಮನವಿಯನ್ನು ತಿರಸ್ಕರಿಸಿ “ನಿಕುಲು ಕೊರ್ಲೆ. ಅಕುಲು ಎಂಚಿನ ಮಲ್ಪೆರ್‌ ಯಾನ್‌ ತೂಪೆ” ಎಂದು ಅವರು ಕಾರ್ಯಕರ್ತರಿಗೆ ಹೇಳಿದ್ದಾರೆ.

ಇಂತಹ ವಿಚಾರ ಶಾಸಕರಿಗೆ ಶೋಭೆ ತರುವಂತದಲ್ಲ. ಇಲ್ಲಿ ಚುನಾವಣೆಗೆ ನಿಂತವರಿಗೂ ಇದು ಒಳ್ಳೆಯದಲ್ಲ. ಅವರು ಶಾಸಕರಿಗೆ ಬುದ್ಧಿ ಹೇಳಬೇಕು. ಅವರ ಪಕ್ಷಕ್ಕೂ ಇದು ಕೆಟ್ಟ ಹೆಸರು ತರುತ್ತದೆ. ಈ ಕ್ಷೇತ್ರದಲ್ಲಿ ಯಾವುದೇ ರಾಜಕೀಯ ಇಲ್ಲ. ಎಲ್ಲರೂ ಇಲ್ಲಿಗೆ ಬರಬಹುದು. ಶಾಸಕ ವೇದವ್ಯಾಸ್‌ ಕಾಮತ್‌ ಅವರ ವರ್ತನೆ ತುಂಬಾ ನೋವು ತಂದಿದೆ ಎಂದು ವಿಶ್ವಾಸ್ ಕುಮಾರ್ ದಾಸ್ ಹೇಳಿದ್ದಾರೆ.

LEAVE A REPLY

Please enter your comment!
Please enter your name here