ವಿವಿಪ್ಯಾಟ್ ನಲ್ಲಿ ದೋಷ – ಬಿಇಎಲ್ ಇಂಜಿನಿಯರ್ ಗಳನ್ನು ದೂಷಿಸಿದ ಕಾಸರಗೋಡು ಚುನಾವಣಾಧಿಕಾರಿ

ಮಂಗಳೂರು(ಕಾಸರಗೋಡು): ಕಾಸರಗೋಡು ಕ್ಷೇತ್ರದಲ್ಲಿ ಎ.17ರಂದು ನಡೆಸಲಾದ ಅಣಕು ಮತದಾನದಲ್ಲಿ ನಾಲ್ಕು ವಿವಿಪ್ಯಾಟ್ ಯಂತ್ರಗಳಿಂದ ಹೆಚ್ಚುವರಿ ಚೀಟಿಗಳು ಮುದ್ರಿಸಲ್ಪಟ್ಟಿದ್ದನ್ನು ಕೇರಳದ ಮುಖ್ಯ ಚುನಾವಣಾಧಿಕಾರಿ ಸಂಜಯ ಕೌಲ್ ಅವರು ಒಪ್ಪಿಕೊಂಡಿದ್ದಾರೆ. ಆದರೆ ಬಿಜೆಪಿಯು ಹೆಚ್ಚುವರಿ ಮತಗಳನ್ನು ಪಡೆದಿತ್ತು ಎಂಬ ಆರೋಪವನ್ನು ಅವರು ‘ಆಧಾರರಹಿತ’ ಎಂದು ತಳ್ಳಿಹಾಕಿದ್ದಾರೆ. ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಇಂಬಶೇಖರ ಕಾಳಿಮತ್ತು ಅವರು ಈ ಲೋಪಕ್ಕೆ ಬಿಇಎಲ್ ಇಂಜಿನಿಯರ್ಗಳನ್ನು ಹೊಣೆಯಾಗಿಸಿದ್ದಾರೆ.

ಈ ಬಗ್ಗೆ ದೂರು ಸ್ವೀಕರಿಸಿದ ಬಳಿಕ ಕಾಳಿಮುತ್ತು ಅವರಿಂದ ವರದಿಯನ್ನು ಕೋರಲಾಗಿತ್ತು ಎಂದು ತಿಳಿಸಿದ ಕೌಲ್,ಅಣಕು ಮತದಾನದ ಸಂದರ್ಭದಲ್ಲಿ ಹೆಚ್ಚುವರಿ ವಿವಿಪ್ಯಾಟ್ ಚೀಟಿಗಳು ಬಂದಿವೆ ಎಂಬ ಆರೋಪದ ಬಳಿಕ ಗೊಂದಲ ಸೃಷ್ಟಿಯಾಗಿದೆ. ಚಿಹ್ನೆಯನ್ನು ಲೋಡ್ ಮಾಡಿದ ಬಳಿಕ ಪರೀಕ್ಷಾ ಮತದಾನ ಚೀಟಿಗಳ ಮುದ್ರಣ ಸಮಯದಲ್ಲಿ ವಿವಿಪ್ಯಾಟ್ ಪರೀಕ್ಷಾ ಚೀಟಿಗಳ ಪೂರ್ಣ ಮುದ್ರಣವನ್ನು ತೆಗೆದುಕೊಳ್ಳದ ಕೆಲವು ಯಂತ್ರಗಳನ್ನು ಅಣಕು ಮತದಾನದ ಸ್ಥಳಕ್ಕೆ ಸಾಗಿಸಲಾಗಿತ್ತು. ಅಲ್ಲಿ ಯಂತ್ರವನ್ನು ಮರು ಕಾರ್ಯಾರಂಭಗೊಳಿಸಿದಾಗ ಮೊದಲ ಅಭ್ಯರ್ಥಿಯ ಚಿಹ್ನೆಯು ಹಿಂದಿನ ಅವಧಿಯಲ್ಲಿ ಮುದ್ರಣಗೊಳ್ಳಬೇಕಿದ್ದ ವಿವಿಪ್ಯಾಟ್ ಚೀಟಿಯೊಂದಿಗೆ ಮುದ್ರಣಗೊಂಡಿತ್ತು ಎಂದು ವಿವರಿಸಿದರು.

ಅಣುಕು ಮತದಾನದಲ್ಲಿ ಕಂಟ್ರೋಲ್ ಯೂನಿಟನ್ನು ಕಾರ್ಯಾರಂಭಗೊಳಿಸಿದಾಗ ನಾಲ್ಕು ವಿವಿಪ್ಯಾಟ್ ಯಂತ್ರಗಳು ‘ಎಣಿಕೆ ಮಾಡಬಾರದು’ ಮತ್ತು ಇದು ‘ಪ್ರಮಾಣೀಕರಣಕ್ಕೆ ಮಾತ್ರ ’ ಎಂಬ ಒಕ್ಕಣೆಗಳೊಂದಿಗೆ ವಿವಿಪ್ಯಾಟ್ ಕ್ರಮಸಂಖ್ಯೆ ಮತ್ತು ಮೊದಲ ಅಭ್ಯರ್ಥಿಯ ಚಿಹ್ನೆಯಿದ್ದ ಹೆಚ್ಚುವರಿ ಚೀಟಿಗಳನ್ನು ಮದ್ರಿಸಿದ್ದವು. ಇಲ್ಲಿ ಇವಿಎಮ್ ನಲ್ಲಿ ಮೊದಲ ಹೆಸರು ಬಿಜೆಪಿ ಅಭ್ಯರ್ಥಿಯದಾಗಿತ್ತು ಎಂದು ಕಾಳಿಮತ್ತು ತನ್ನ ವರದಿಯಲ್ಲಿ ತಿಳಿಸಿದ್ದಾರೆ. ಕೆಲವು ವಿವಿಪ್ಯಾಟ್ ಯಂತ್ರಗಳಿಂದ ಪೂರ್ವ ಮುದ್ರಣಗಳನ್ನು ಪಡೆದಿಕೊಳ್ಳದೆ ಅಣಕು ಮತದಾನದ ಟೇಬಲ್ ಗೆ ಸಾಗಿಸಲಾಗಿತ್ತು ಎಂದು ಬಿಇಎಲ್ ಇಂಜನಿಯರ್ಗಳಾದ ಪವನ ಕುಮಾರ ಮಿಶ್ರಾ ಮತ್ತು ಶಿವಂ ಯಾದವ ಒಪ್ಪಿಕೊಂಡಿದ್ದು,ಇಲ್ಲಿ ಪ್ರಮಾದ ಅವರಿಂದಾಗಿ ಸಂಭವಿಸಿತ್ತು ಎಂದೂ ಅವರು ಹೇಳಿದ್ದಾರೆ.

LEAVE A REPLY

Please enter your comment!
Please enter your name here