ಧಾರವಾಡ ಅಂಜುಮನ್ ಇಸ್ಲಾಮ್ ನ ಐತಿಹಾಸಿಕ ತೀರ್ಮಾನ-ಅಂಜುಮನ್ ಕಾಲೇಜಿನ ಕೊಠಡಿಯೊಂದಕ್ಕೆ ನೇಹಾ ಹಿರೇಮಠ ಹೆಸರಿಡಲು ನಿರ್ಧಾರ

ಮಂಗಳೂರು(ಧಾರವಾಡ): ನೇಹಾ ಹಿರೇಮಠ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಧಾರವಾಡ ಅಂಜುಮನ್ ಇಸ್ಲಾಂ ಸಂಸ್ಥೆ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದೆ.

ಧಾರವಾಡದಲ್ಲಿರುವ ಅಂಜುಮನ್ ಇಸ್ಲಾಮ್ ಶಿಕ್ಷಣ ಸಂಸ್ಥೆಯ ತರಗತಿ ಕೊಠಡಿಯೊಂದಕ್ಕೆ ಶಾಶ್ವತವಾಗಿ ನೇಹಾ ಹಿರೇಮಠ ಹೆಸರಿಡಲು ತೀರ್ಮಾನ ತೆಗೆದುಕೊಂಡಿರುವುದಾಗಿ ಅಂಜುಮನ್ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ತಿಳಿಸಿದ್ದಾರೆ. ನೇಹಾ ಹಿರೇಮಠ ಹೆಸರಿನ ಕೊಠಡಿ ಉದ್ಘಾಟನೆಯನ್ನು ನೇಹಾ ಪಾಲಕರಿಂದ ನೆರವೇರಿಸುವುದಾಗಿ ಹೇಳಿದ್ದಾರೆ. ನೇಹಾ, ಸಾವು ನಾಡಿನ ಮುಸ್ಲಿಮ್ ಸಮಾಜಕ್ಕೆ ಬಹಳಷ್ಟು ನೋವು ತಂದಿದೆ. ಧಾರವಾಡದಲ್ಲಿ ಬೃಹತ್ ಮೌನ ಮೆರವಣಿಗೆ ನಡೆಸಿ ನಿಜವಾದ ಶೃದ್ದಾಂಜಲಿ ಸಲ್ಲಿಸುವುದಾಗಿ ಇಸ್ಮಾಯಿಲ್ ತಮಟಗಾರ ಹೇಳಿದ್ದಾರೆ. ನೇಹಾ ಕೊಲೆ ಆರೋಪಿ ಫಯಾಜ್ ಗೆ ಕಠಿಣ ಶಿಕ್ಷೆ ಕೊಡಬೇಕೆಂದು ಆಗ್ರಹಿಸಿರುವ ಅಂಜುಮನ್ ಸಂಸ್ಥೆ, ತೀವ್ರಗತಿಯಲ್ಲಿ ಪ್ರಕರಣದ ವಿಚಾರಣೆ ನಡೆಸಬೇಕೆಂದು ಆಗ್ರಹಿಸಿದೆ.

LEAVE A REPLY

Please enter your comment!
Please enter your name here