ಮಂಗಳೂರು: ಲೋಕಸಭೆ ಚುನಾವಣೆ, ಇದು ದೇಶದ ಪ್ರಮುಖ ಚುನಾವಣೆಯಾಗಿದ್ದು, ಈ ಹಿಂದೆ ಚುನಾವಣೆ ಒಂದು ತಿಂಗಳ ಒಳಗೆ 20 ದಿನಗಳಲ್ಲಿ ಮುಗಿತಿತ್ತು. ಆದ್ರೆ ಈ ಬಾರಿ ಚುನಾವಣೆಗೆ 60 ದಿನಗಳಿಗೂ ಅಧಿಕ ಸಮಯ ತೆಗೆದುಕೊಳ್ಳಲಾಗಿದೆ. ಇದರ ಹಿಂದಿರುವ ವಿಚಾರ ಏನು ಎಂಬುದನ್ನು ಚುನಾವಣಾ ಆಯೋಗ ಮತ್ತು ಪ್ರಧಾನಿ ಸ್ಪಷ್ಟ ಪಡಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಹೇಳಿದ್ದಾರೆ.
ಇಂದು(ಎ.21) ಮಂಗಳೂರಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಆಧುನಿಕತೆ ತಂತ್ರಜ್ಞಾನ ಬೆಳವಣಿಗೆ ಆಗ್ತಿದ್ದಂತೆ ಚುನಾವಣಾ ಕಾಲಾವಧಿ ಕಡಿಮೆಯಾಗಬೇಕಿತ್ತು. ಆದರೆ ಇಲ್ಲಿ ಮೂರು ತಿಂಗಳ ಕಾಲಾವಕಾಶ ಪಡೆದುಕೊಳ್ಳಲಾಗಿದೆ. ಒಂದು ದೇಶ ಒಂದು ಚುನಾವಣೆ ಎಂದು ಹೇಳ್ತಾರೆ. ಹಾಗೇನಾದ್ರು ಆದಲ್ಲಿ ಈ ದೇಶದಲ್ಲಿ ಚುನಾವಣೆ ನಡೆಸಲು ಒಂದು ವರ್ಷ ಬೇಕಾದಿತು ಎಂದು ಮೊಯ್ಲಿ ಟೀಕಿಸಿದರು.
ಬಿಜೆಪಿಯವರು ಒಂದು ದೇಶ ಒಂದು ಚುನಾವಣೆಯಲ್ಲಿ ಮತದಾರರು ಪಂಚಾಯತ್ ನಿಂದ ಕೇಂದ್ರದ ವರೆಗೆ ಬಿಜೆಪಿಯನ್ನು ಆಯ್ಕೆ ಮಾಡುತ್ತಾರೆ ಅಂದುಕೊಂಡು ಕನಸು ಕಾಣ್ತಾ ಇದ್ದಾರೆ. ಆದ್ರೆ ಈ ಬಾರಿ ದೇಶದ ಜನತೆ ತಕ್ಕ ಉತ್ತರ ನೀಡಲಿದ್ದಾರೆ. ಕಳೆದ ಹತ್ತು ವರ್ಷಗಳ ಆಡಳಿತದಲ್ಲಿ ಏನು ಆಗಿದೆ ಎಂಬುದನ್ನು ಜನರು ತೋರಿಸಿಕೊಡಲಿದ್ದಾರೆ. ಬಿಜೆಪಿ 400 ಕ್ಕೂ ಅಧಿಕ ಸೀಟ್ ಪಡೆಯಲಿದೆ ಅಂತಾರೆ. ಆದ್ರೆ ಇವರು 150 ಸೀಟ್ ಪಡೆಯಲಿದ್ದಾರೆ ಎಂದು ಮೊಯ್ಲಿ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಐವನ್ ಡಿಸೋಜಾ, ಜೆ ಆರ್ ಲೋಬೋ ಉಪಸ್ಥಿತರಿದ್ದರು.