ಮಂಗಳೂರು(ತೈಪೆ): ತೈವಾನ್‌ನಲ್ಲಿ 6.3 ತೀವ್ರತೆಯ ಪ್ರಬಲ ಭೂಕಂಪನ ಸಂಭವಿಸಿದೆ. ಕಳೆದ 24 ಗಂಟೆಗಳಲ್ಲಿ ತೈವಾನ್‌ನ ಪೂರ್ವ ಕರಾವಳಿಯಲ್ಲಿ ಸುಮಾರು 80ಕ್ಕೂ ಹೆಚ್ಚು ಬಾರಿ ಭೂಮಿ ಕಂಪಿಸಿರುವುದಾಗಿ ವರದಿಯಾಗಿದೆ.
ಸೋಮವಾರ ರಾತ್ರಿ ಮತ್ತು ಮಂಗಳವಾರ ಮುಂಜಾನೆ ಈ ಘಟನೆ ನಡೆದಿದ್ದು, ಎರಡು ಬಾರಿ ಪ್ರಬಲ ಭೂಕಂಪನಗಳು ಸಂಭವಿಸಿವೆ. ಜೊತೆಗೆ ಹುವಾಲಿಯನ್ ನ ಪೂರ್ವ ಕೌಂಟಿಯಲ್ಲಿ ಭೂಮಿಯಿಂದ 5.5 ಕಿ.ಮೀ.ಗಳಷ್ಟು ಆಳದಲ್ಲಿ ಭೂಕಂಪನದ ಕೇಂದ್ರಬಿಂದು ಇದೆ ಎಂದು ತೈವಾನ್‌ನ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಭೂಕಂಪನದಿಂದಾಗಿ ಹುವಾಲಿಯನ್ ಪ್ರದೇಶದಲ್ಲಿನ ಬಹುತೇಕ ಕಟ್ಟಡಗಳಿಗೆ ಹಾನಿ ಉಂಟಾಗಿದೆ. ಈ ಪೈಕಿ ಒಂದು ಕಟ್ಟಡ ಕುಸಿದು ಬಿದ್ದಿದೆ. ಹಾಗೂ ಇನ್ನೊಂದು ರಸ್ತೆಗೆ ವಾಲಿಕೊಂಡಿದೆ. ತೈವಾನ್ ನೊಂದಿಗೆ ಜಪಾನ್, ಚೀನಾ ಮತ್ತು ಫಿಲಿಪೈನ್ಸ್ ನಲ್ಲಿಯೂ ಲಘು ಕಂಪನದ ಅನುಭವವಾಗಿದೆ ಎಂದು ತಿಳಿದುಬಂದಿದೆ.
? BREAKING: A 6.1 MAGNITUDE EARTHQUAKE HAS HIT TAIWAN'S CAPITAL TAIPEI. ? ‼️ pic.twitter.com/YadLWcrtDG
— DramaAlert (@DramaAlert) April 22, 2024