ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿಯಲ್ಲಿ ಶ್ರೇಷ್ಠ ಸಾದನೆ ಮಾಡಿದ ಸಯನ್ಸ್ -ಕಾಮರ್ಸ್- ಆರ್ಟ್ಸ್ ವಿಭಾಗದ 134 ವಿದ್ಯಾರ್ಥಿಗಳನ್ನು ಪುತ್ತೂರು ಕಮ್ಯೂನಿಟಿ ಸೆಂಟರ್ ಮೂಲಕ ಸನ್ಮಾನಿಸಲಾಯಿತು. ಶ್ರೇಷ್ಠ ಮೆದುಳುಗಲು ದಾರಿ ತಪ್ಪುವುದನ್ನು ಮತ್ತು ನಿರುಪಯುಕ್ತವಾಗುವುದನ್ನು ತಪ್ಪಿಸಲು ಕಮ್ಯೂನಿಟಿ ಸೆಂಟರ್ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಕರೆದು ಅವರನ್ನು ಗೌರವಿಸಿ ಅವರಿಗೆ ಸರಿಯಾದ ವೃತ್ತಿ ಮಾರ್ಗದರ್ಶನ ನೀಡಿ, ಅವರ ಶೈಕ್ಷಣಿಕ ದಾರಿಯಲ್ಲಿ ಪ್ರೋತ್ಸಾಹ ಮತ್ತು ಸಹಾಯ ಒದಗಿಸುತ್ತದೆ. ರಾಷ್ಟ್ರೀಯ ಮಾನವ ಸಂಪನ್ಮೂಲ ಅಭಿವೃದ್ದಿ ಯೋಜನೆಯಲ್ಲಿ ಗ್ರಾಮಾಂತರ ಮತ್ತು ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಸೆಂಟರ್ ಅತ್ಯುತ್ತಮ ವೃತ್ತಿ ಮಾರ್ಗದರ್ಶನ ನೀಡಿ ಅವರಿಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಒದಗಿಸಿ ಕೊಡುತ್ತಿದೆ. ಈಗಾಗಲೇ 8 ಸಾವಿರಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದಿದ್ದಾರೆ.
ನಗರದ ಜಮೀಯತ್ತುಲ್ ಫಲಾಹ್ ದ ಸಭಾಂಗಣದಲ್ಲಿ ನಡೆದ ‘ಬುದ್ದಿಜೀವಿ ವಿದ್ಯಾರ್ಥಿಗಳೊಂದಿಗೆ ಸಂವಾದ’ ಎಂಬ ಕಾರ್ಯಕ್ರಮ ಆಯೋಜಿಸಿ ಅವರಿಗೆ ವಿವಿಧ ಸಂಪನ್ಮೂಲ ವ್ಯಕ್ತಿಗಳ ಮೂಲಕ ವಿವಿಧ ವೃತ್ತಿಪರ ಕೋರ್ಸ್ ಗಳ ಬಗ್ಗೆ ಮಾಹಿತಿ ನೀಡಲಾಯಿತು. ಈ ಸಂದರ್ಭ ಖ್ಯಾತ ಉದ್ಯಮಿ ಭಾರತ್ ಮುಸ್ತಫಾ ವಿದ್ಯಾರ್ಥಿಗಳೊಂದಿಗೆ ಮಾತನಾಡುತ್ತಾ, ನೀವು ಆಲೋಚನೆಗಳನ್ನು ಬದಲಾಯಿಸಿ ನಿಮ್ಮ ಬದುಕು ಬದಲಾಗುತ್ತದೆ. ನೀವು ಬಾಹ್ಯಾಕಾಶದ ಅಧ್ಯಯನ ಬಗ್ಗೆ ಆಲೋಚಿಸಿದರೆ ನೀವು ಅದನ್ನು ತಲುಪುತ್ತೀರಿ ಎಂದು ಉತ್ತೇಜಿಸಿದರು.
ಯೆನಪೋಯ ವಿಶ್ವವಿದ್ಯಾನಿಲಯದ ನಿರ್ದೇಶಕರಾದ ಮಹಮ್ಮದ್ ಫರಾದ್ ಮಾತನಾಡುತ್ತಾ, ಹೆತ್ತವರನ್ನು ಪ್ರೀತಿಸಿ ಮತ್ತು ಗೌರವಿಸಿ ಖಂಡಿತಾ ಯಶಸ್ಸನ್ನು ಪಡೆಯುತ್ತೀರಿ ಎಂದು ಹಿತನುಡಿದರು. ಬೆಂಗಳೂರಿನ ಫಾಲ್ಕನ್ ಶಿಕ್ಷಣ ಸಂಸ್ಥೆಯ ಸ್ಥಾಪಕರಾದ ಅಬ್ದುಲ್ ಸುಬಾನ್ ಮಾತನಾಡುತ್ತಾ, ನೀಟ್ ಬಗ್ಗೆ ವಿದ್ಯಾರ್ಥಿಗಳಿಗೆ ಈಗ ಜಾಗೃತಿ ಮೂಡಿದೆ, ಇನ್ನು ಜೆಇಇ – ಯುಪಿಎಸ್ಇ ಗೆ ನೀವು ವಿದ್ಯಾರ್ಥಿಗಳನ್ನು ತರಬೇತಿಗೊಳಿಸಿ ಎಂದು ಸೆಂಟರ್ ಗೆ ಸಲಹೆ ನೀಡಿದರು.
ಸುಮಾರು 134 ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಅವರಿಗೆ ನಗದು ಪ್ರೋತ್ಸಾಹ ಧನ ನೀಡಿ ಗೌರವಿಸಲಾಯಿತು. ನೀಟ್, ಜೆಇಇ, ಸಿಎಲ್‌ಎಟಿ, ಯುಪಿಎಸ್‌ಇ, ಸಿಎ, ಲಾʼ ಮುಂತಾದ ವೃತ್ತಿಪರ ಕೋರ್ಸ್ ಗೆ ಮೊದಲ 50 ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶಾತಿಯನ್ನು ಘೋಷಿಸಲಾಯಿತು. ಹೆಚ್ಚು ವಿದ್ಯಾರ್ಥಿಗಳು ಬಂದರೆ ಪರೀಕ್ಷೆ ನಡೆಸಿ ಆಯ್ಕೆ ಮಾಡುವುದಾಗಿ ತಿಳಿಸಲಾಯಿತು. ಕಾರ್ಯಕ್ರಮದಲ್ಲಿ ಕಮ್ಯುನಿಟಿ ಸೆಂಟರ್ ನ ಮೂಲಕ ರಾಜ್ಯಕ್ಕೆ 8 ನೇ ರ್ಯಾಂಕ್ ಗಳಿಸಿದ ಶೈಮಾ, ಈ ಬಾರಿ ಜೆಇಇ ಯಲ್ಲಿ ಅರ್ಹತೆ ಗಳಿಸಿದ ಸುಹೈಲ್, ಸಿಎ ಫೌಂಡೇಶನ್ ಪಾಸಾದ ಮಿಗ್ದಾದ್ ರನ್ನು ಸನ್ಮಾನಿಸಿ ಗೌರವಿಸಲಾಯಿತು. ಸೆಂಟರ್ ಮೂಲಕ ಜಿಲ್ಲೆಯ ಶ್ರೇಷ್ಠ ವಿದ್ಯಾರ್ಥಿಗಳನ್ನು ಅಭಿನಂದಿಸುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೆಂಟರಿನ ಅಧ್ಯಕ್ಷ ಅಮ್ಜದ್ ಖಾನ್ ಪೋಳ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ವೈಟ್ ಸ್ಟೋನ್ ಮಾಲಕರಾದ ಬಿ.ಎಂ.ಶರೀಫ್ ಜೋಕಟ್ಟೆ, ಬಿ-ಹ್ಯೂಮನ್ ಸ್ಥಾಪಕರಾದ ಆಸಿಫ್ ಡೀಲ್ಸ್, ಉದ್ಯಮಿ ಅಬ್ದುಲ್ಲಾ ಮೋನು ಕತ್ತಾರ್, ಸುಲ್ತಾನ್ ಗೋಲ್ಡ್ ನ ಮಾಲಕರಾದ ರವೂಫ್, ಭಾರತ್ ಇನ್ ಪ್ರಾಸ್ಟ್ರಕ್ಚರ್ ನ ಝಿಯಾ ಎಸ್.ಎಂ, ವಿಜಯಕರ್ನಾಟಕ ಪತ್ರಿಕೆಯ ವರದಿಗಾರ ಆರಿಫ್ ಪಡುಬಿದ್ರಿ, ವಾರ್ತಾ ಅಧಿಕಾರಿ ಖಾದರ್ ಷಾ, ಮೊಟಿವೇಶನ್ ಟ್ರೈನರ್ ರಫೀಕ್ ಮಾಸ್ಟರ್, ಮೈಮುನಾ ಖಾಲಿದ್, ಸೆಂಟರಿನ ಎಂ.ಬಿ.ಬಿ ಎಸ್ ವಿದ್ಯಾರ್ಥಿಗಳಾದ ಅಮಿಷಾ, ಮಝ್ವಾ, ಸಝಾ, ಸಹೀಲ , ಶಾಹಿದಾರವರು ಸಾದಕ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು. ಐಐಟಿ ಮತ್ತು ಇಂಜಿನಿಯರಿಂಗ್ ವಿಷಯದಲ್ಲಿ ಹನಿವೆಲ್ ಕಂಪೆನಿಯ ಇಮ್ರೋಝ್, ಮೆಡಿಕಲ್ ಕಿರಿತಂತೆ ಅಮ್ನಾಝ್ ರವರು ಕೆರಿಯರ್ ಗೈಡೆನ್ಸ್ ಮಾಡಿದರು. ಟ್ರಸ್ಟ್ ನ ಸದಸ್ಯರಾದ ಇಮ್ತಿಯಾಝ್ , ಹನೀಫ್ ಪುತ್ತೂರು, ನಝೀರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಡಾ. ವಾಜಿದಾರವರು ಕಾರ್ಯಕ್ರಮ ನಿರೂಪಿಸಿದರು.