ಪತ್ರಿಕಾ ಸ್ವಾತಂತ್ರ್ಯ, ಭಾರತಕ್ಕೆ 159ನೇ ಸ್ಥಾನ-ರಿಪೋರ್ಟರ್ಸ್‌ ವಿದೌಟ್‌ ಬಾರ್ಡರ್ಸ್ ವರದಿಯಲ್ಲಿ ಮಾಹಿತಿ

ಮಂಗಳೂರು(ಹೊಸದಿಲ್ಲಿ): 2024ರ ಜಾಗತಿಕ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತವು 159ನೇ ಸ್ಥಾನದಲ್ಲಿದ್ದು, ಕಳೆದ ವರ್ಷಕ್ಕಿಂತ ಎರಡು ರ‍್ಯಾಂಕ್‌ ಮೇಲಕ್ಕೇರಿದೆ. 2023ರಲ್ಲಿ ಅದರ ರ‍್ಯಾಂಕಿಂಗ್ 161 ಆಗಿತ್ತು.

ರಿಪೋರ್ಟರ್ಸ್‌ ವಿದೌಟ್‌ ಬಾರ್ಡರ್ಸ್ ನ ನಿರಂಕುಶವಾದಿ ಸರಕಾರಗಳ ಆಡಳಿತದಡಿಯಲ್ಲಿ ಪತ್ರಿಕಾ ಸ್ವಾತಂತ್ರ್ಯ ಎಂಬ ಶೀರ್ಷಿಕೆಯ ಈ ವರದಿಯಲ್ಲಿ ಭಾರತವು ಕಳೆದ ವರ್ಷಕ್ಕಿಂತ ಎರಡು ರ‍್ಯಾಂಕ್‌ ಮೇಲಕ್ಕೇರಿದೆ. ಈ ಮೊದಲು ಭಾರತಕ್ಕಿಂತ ರ‍್ಯಾಂಕಿಂಗ್ ನಲ್ಲಿ ಮೇಲೆ ಇದ್ದ ದೇಶಗಳು ಈ ಸಲ ಕಳಪೆ ನಿರ್ವಹಣೆಯನ್ನು ಪ್ರದರ್ಶಿಸಿರುವುದೇ ಇದಕ್ಕೆ ಕಾರಣವಾಗಿದೆ. ಪತ್ರಿಕಾ ಸ್ವಾತಂತ್ರ್ಯದ ವಿರುದ್ಧ ಇನ್ನಷ್ಟು ಕರಾಳ ಕಾನೂನುಗಳನ್ನು ಜಾರಿಗೊಳಿಸಿದ ಹೊರತಾಗಿಯೂ ಭಾರತವು ಎರಡು ರ‍್ಯಾಂಕ್‌ ಮೇಲಕ್ಕೇರಿದೆ. ಆದರೂ ಅದರ ನೂತನ ಸ್ಥಾನವು ಪ್ರಜಾಪ್ರಭುತ್ವಕ್ಕೆ ಯೋಗ್ಯವೆನಿಸುವುದಿಲ್ಲವೆಂದು ವರದಿ ಅಭಿಪ್ರಾಯಿಸಿದೆ.

ಸರಕಾರಗಳಾಗಲಿ ಅಥವಾ ರಾಜಕೀಯ ಪಕ್ಷಗಳಾಗಲಿ ಪತ್ರಿಕೋದ್ಯಮಕ್ಕೆ ಅತ್ಯುತ್ತಮವಾದ ವಾತಾವರಣವನ್ನು ಹಾಗೂ ವಿಶ್ವಸನೀಯ, ಸ್ವತಂತ್ರ ಹಾಗೂ ವೈವಿಧ್ಯಮಯ ಸುದ್ದಿಗಳು ಹಾಗೂ ಮಾಹಿತಿಯನ್ನು ಪಡೆಯುವ ಸಾರ್ವಜನಿಕರ ಹಕ್ಕನ್ನು ಖಾತರಿಪಡಿಸುವಲ್ಲಿ ವಿಫಲವಾಗಿವೆ ಎಂದು ಆರ್ಎಸ್ಎಫ್ ವರದಿ ತಿಳಿಸಿದೆ. ಪತ್ರಿಕಾ ಸ್ವಾತಂತ್ರ್ಯದ ರ‍್ಯಾಂಕಿಂಗ್ ನಲ್ಲಿ ಭಾರತಕ್ಕಿಂತ ಅದರ ನೆರೆಹೊರೆಯ ದೇಶಗಳು ತುಸು ಉತ್ತಮ ನಿರ್ವಹಣೆಯನ್ನು ಪ್ರದರ್ಶಿಸಿವೆ. ಪಾಕಿಸ್ತಾನ 152, ಶ್ರೀಲಂಕಾ 15, ನೇಪಾಳ 7 ಹಾಗೂ ಮಾಲ್ದೀವ್ಸ್ 106ನೇ ಸ್ಥಾನದಲ್ಲಿವೆ. ಅಫ್ಘಾನಿಸ್ತಾನ 178, ಬಾಂಗ್ಲಾದೇಶ 165 ಹಾಗೂ ಮ್ಯಾನ್ಮಾರ್ 171ನೇ ಸ್ಥಾನದಲ್ಲಿದೆ.

LEAVE A REPLY

Please enter your comment!
Please enter your name here