ಮಕ್ಕಳಾಟದ ರಾಕ್ಷಸ ಸಂಹಾರ ಸನ್ನಿವೇಶ-ನಿಜವಾದ ಚಾಕುವಿನಿಂದ ಕುತ್ತಿಗೆ ಸೀಳಿದ ಪಾತ್ರಧಾರಿ ಬಾಲಕ‌-ಮುಂದೇನಾಯ್ತು ?

ಮಂಗಳೂರು(ಉತ್ತರ ಪ್ರದೇಶ): ಕಾಳಿದೇವಿಯ ಪಾತ್ರಧಾರಿಯೊಬ್ಬ ನಿಜವಾಗಿಯೂ ರಾಕ್ಷಸ ಪಾತ್ರಧಾರಿಯ ಸಂಹಾರ ಮಾಡಿದ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.

ಪೌರಾಣಿಕ ಸನ್ನಿವೇಶವನ್ನಿಟ್ಟುಕೊಂಡು ನೆರೆಹೊರೆಯ ಮಕ್ಕಳು ಆಟವಾಡುತ್ತಿದ್ದಾಗ ಈ ದುರಂತ ನಡೆದಿದೆ. ಕಾಳಿದೇವಿಯ ಪಾತ್ರಧಾರಿ 14 ವರ್ಷದ ಬಾಲಕ 11 ವರ್ಷದ ಬಾಲಕನ ಕತ್ತು ಸೀಳಿದ್ದಾನೆ. ಘಟನೆಯ ನಂತರ ಪೊಲೀಸರು ಸ್ಥಳಕ್ಕೆ ಧಾವಿಸಿ 14 ವರ್ಷದ ಬಾಲಕ ಮತ್ತು ಇತರ ಇಬ್ಬರು ಮಕ್ಕಳನ್ನು ವಿಚಾರಣೆಗಾಗಿ ಕರೆದೊಯ್ದಿದ್ದಾರೆ. ಪೊಲೀಸರ ಪ್ರಕಾರ, ಕಾನ್ಪುರದ ಬಿಲಹೌರ್ ಪ್ರದೇಶದ ಬಂಬಿಯಾನ್‌ಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸುಭಾಷ್ ಸೈನಿ ಎಂಬುವರ ಮನೆಯಲ್ಲಿ ಭಗವತ್ ಕಥಾನಕವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಭಾಗವಾಗಿ ಮಕ್ಕಳು ಭಗವತ್ ಕಥಾದ ಹಲವಾರು ಪಾತ್ರಗಳನ್ನು ನಿರ್ವಹಿಸುತ್ತಿದ್ದರು. ಈ ಸಂದರ್ಭದಲ್ಲಿ, ಕಾಳಿ ದೇವಿಯ ಪಾತ್ರ ನಿರ್ವಹಿಸುತ್ತಿದ್ದ ಬಾಲಕನಿಗೆ ತ್ರಿಶೂಲ ಸಿಗದ್ದರಿಂದ ಚಾಕುವನ್ನೇ ಹಿಡಿದಿದ್ದ. ರಾಕ್ಷಸ ಪಾತ್ರಧಾರಿ ಕಾಳಿದೇವಿಯ ಕಾಲಿಗೆರಗಿದಾಗ ರಾಕ್ಷಸ ಸಂಹಾರ ಸನ್ನಿವೇಶ ನಿರ್ವಹಿಸುವ ಭರದಲ್ಲಿ ಚಾಕುವಿನಿಂದ ಪಾತ್ರಧಾರಿ ಬಾಲಕನ ಕತ್ತು ಸೀಳಿಬಿಟ್ಟಿದ್ದಾನೆ. ಗಂಭೀರವಾಗಿ ಗಾಯಗೊಂಡ ಬಾಲಕನನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಪ್ರಯೋಜನವಾಗಲಿಲ್ಲ.

LEAVE A REPLY

Please enter your comment!
Please enter your name here