ಮಂಗಳೂರು(ಹಾಸನ): ಹಾಸನದಲ್ಲಿ ನಡೆದಿರುವ ಘಟನೆ ಇಂಗ್ಲೆಂಡ್ನಲ್ಲೂ ನಡೆದಿತ್ತು. ಹೆಚ್ ಡಿ ರೇವಣ್ಣ ಅಲ್ಲಿ ತಗ್ಲಾಕಿಕೊಂಡಿದ್ರು ಎಂದು ಬಿಜೆಪಿ ನಾಯಕ ಶಿವರಾಮೇಗೌಡ ಹೊಸ ಬಾಂಬ್ ಸಿಡಿಸಿದ್ದಾರೆ.
ಮಂಡ್ಯದ ಮಾಜಿ ಸಂಸದ ಶಿವರಾಮೇಗೌಡರು 30 ವರ್ಷದ ಹಳೇ ಘಟನೆ ರಿವೀಲ್ ಮಾಡಿದ್ದು, ಮಾಜಿ ಸಚಿವ ರೇವಣ್ಣ ಅವರಿಗೆ ಈ ಘಟನೆ ಏನೂ ಹೊಸದಲ್ಲ. ಹಾಸನದಲ್ಲಿ ನಡೆದಿರುವ ಘಟನೆ ಇಂಗ್ಲೆಂಡ್ನಲ್ಲಿಯೂ ನಡೆದಿತ್ತು. ನನ್ನ ಹಾಗೂ ಅವರ ಕುಟುಂಬ ಇಂಗ್ಲೆಂಡ್ ಪ್ರವಾಸಕ್ಕೆ ಹೋಗಿದ್ವಿ. ಇದೇ ರೀತಿ ರೇವಣ್ಣ ಇಂಗ್ಲೆಂಡ್ನಲ್ಲೂ ತಗ್ಲಾಕಿಕೊಂಡಿದ್ರು ಎಂದು ಹೇಳಿದ್ದಾರೆ. ಆ ಸಂಧರ್ಭದಲ್ಲಿ ನಾನು ಹೇಳಿದ್ರೆ, ರೇವಣ್ಣ ಅಮಾಯಾಕ ಅಂತಿದ್ರಿ. ಎಸ್ಐಟಿಯವರು ಈಗಲೂ ಇಂಗ್ಲೆಂಡ್ಗೆ ಹೋಗಿ ತನಿಖೆ ಮಾಡಲಿ. ರೆಕಾರ್ಡ್ನಲ್ಲಿ ಎಲ್ಲಾ ಮಾಹಿತಿ ಸಿಗುತ್ತೆ, ಬೇಕಿದ್ರೆ ಹೋಗಿ ನೋಡಿಕೊಳ್ಳಿ ಎಂದು ಶಿವರಾಮೇಗೌಡರು ಹೇಳಿದ್ದಾರೆ. ಪೆನ್ ಡ್ರೈವ್ ಪ್ರಕರಣದಿಂದ ಎನ್ ಡಿಎ ಮೈತ್ರಿಕೂಟಕ್ಕೆ ಪೆಟ್ಟು ಬೀಳಲಿದೆ, ರೇವಣ್ಣರನ್ನ ನಾನು ಇಂದು ನೋಡ್ತಿಲ್ಲ. ಇಂಗ್ಲೆಂಡ್ ಗೆ ಹೋಗಿದ್ದ ಸಂದರ್ಭದಲ್ಲೇ ಅವರು ಅಲ್ಲೇ ತಗಲಾಕಿಕೊಂಡಿದ್ದರು. ಹಾಸನದಲ್ಲಿ ನಡೆದಂತಹ ಘಟನೆಯೇ ಅಂದು ಇಂಗ್ಲೆಂಡ್ನಲ್ಲೂ ನಡೆದಿತ್ತು. ಈ ಬಗ್ಗೆ ಹೆಚ್ಚು ಮಾತನಾಡೋದಿಲ್ಲ. ರೇವಣ್ಣ ಅಂತಹ ಒಳ್ಳೆಯ ನಡವಳಿಕೆಯ ವ್ಯಕ್ತಿಯಲ್ಲ, ಪ್ರಜ್ವಲ್ ರೇವಣ್ಣ ಇಷ್ಟೊಂದೆಲ್ಲ ಮಾಡೋವಾಗ ಅವರ ಅಪ್ಪ ಅಮ್ಮ ಕತ್ತೆ ಕಾಯ್ತಿದ್ರಾ? ಅಥವಾ ಸಂತ್ರಸ್ಥೆ ಹೇಳಿರುವಂತೆ ಅಪ್ಪ ಒಂದು ಕಡೆ ಮಗ ಒಂದು ಕಡೆ ಹೋಗ್ತಿದ್ರೇನೋ ಎಂದು ಹೇಳಿದ್ದಾರೆ.