ಭಾರತದಲ್ಲಿ ತಯಾರಾದ ಅಸ್ತಮಾ, ಬಿಪಿ ಔಷಧಗಳಲ್ಲಿ ದೋಷ ಪತ್ತೆ-ವಾಪಸ್‌ ಕಳುಹಿಸಿದ ಅಮೇರಿಕಾ

ಮಂಗಳೂರು(ಹೊಸದಿಲ್ಲಿ): ಭಾರತದ ಪ್ರಸಿದ್ಧ ಔಷಧ ತಯಾರಿಕಾ ಸಂಸ್ಥೆಗಳಾದ ಸಿಪ್ಲಾ ಹಾಗೂ ಗ್ಲೆನ್‌ ಮಾರ್ಕ್‌, ಉತ್ಪಾದನೆಯ ಔಷಧಿಗಳಲ್ಲಿ ದೋಷ ಕಂಡುಬಂದ ಹಿನ್ನೆಲೆ ಅಮೆರಿಕಾ ಮಾರುಕಟ್ಟೆಯಿಂದ ವಾಪಸ್‌ ಮಾಡಲಾಗಿದೆ ಎಂದು ಅಮೆರಿಕದ ಆರೋಗ್ಯ ನಿಯಂತ್ರಣ ಸಂಸ್ಥೆ ಮಾಹಿತಿ ನೀಡಿದೆ.

ಅಸ್ತಮಾ ಸೇರಿದಂತೆ ಶ್ವಾಸಕೋಶ ಸಂಬಂಧಿತ ಖಾಯಿಲೆಗಳಿಗೆ ಬಳಸಲಾಗುವ ಇಪ್ರಟ್ರೋಪಿಯಂ ಬ್ರೋಮೈಡ್‌ ಹಾಗೂ ಆಲುಟೆರಾಲ್‌ ಸಲ್ಪೇಟ್‌ ಎಂಬ ಔಷಧ ದ್ರಾವಣವು ಉತ್ಪಾದನೆ ವೇಳೆ ಸರಿಯಾದ ಪ್ರಮಾಣದಲ್ಲಿ ಭರ್ತಿಯಾಗಿರದ ಕಾರಣ 59,244 ಔಷಧ ಪ್ಯಾಕ್‌ ಗಳನ್ನು ಸಿಪ್ಲಾ ಹಿಂಪಡೆದಿದೆ. ಈ ಔಷಧವನ್ನು ಭಾರತದ ಇಂದೋರ್‌ ಘಟಕದಲ್ಲಿ ತಯಾರಿಸಲಾಗಿತ್ತು. ಇದೇ ವೇಳೆ ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಬಳಸಲಾಗುವ ಡಿಲ್ಟಿಯಾಜೆಂ ಹೈಡ್ರೋಕ್ಲೋರೈಡ್‌ ಔಷಧದಲ್ಲಿ ದೋಷ ಕಂಡು ಬಂದಿದ್ದು, ಈ ಔಷಧದ 3,264 ಪ್ಯಾಕ್‌’ಗಳನ್ನು ಗ್ಲೆನ್‌ಮಾರ್ಕ್‌ ಫಾರ್ಮಾಸೆಟಿಕಲ್‌ ಸಂಸ್ಥೆ ಹಿಂಪಡೆದಿದೆ. ಜನರು ಈ ಔಷಧಗಳನ್ನು ಬಳಕೆ ಮಾಡಿದ ಪಕ್ಷದಲ್ಲಿ ಸಂಭವಿಸಬಹುದಾದ ಹಾನಿಗಳನ್ನು ತಡೆಯಲು ಈ ಕ್ರಮಕೈಗೊಳ್ಳಲಾಗಿದೆ.

 

LEAVE A REPLY

Please enter your comment!
Please enter your name here