ಇಸ್ರೇಲ್ ಹಡಗಿನಲ್ಲಿದ್ದ 5 ಭಾರತೀಯರ ಬಿಡುಗಡೆ-11 ಮಂದಿ ಇರಾನ್ ವಶದಲ್ಲಿ

ಮಂಗಳೂರು(ಟೆಹ್ರಾನ್‌): ಇರಾನ್‌ ವಶದಲ್ಲಿದ್ದ ಸರಕು ಸಾಗಣೆ ಹಡಗಿನಲ್ಲಿದ್ದ 16 ಭಾರತೀಯರ ಪೈಕಿ ಐವರನ್ನು ಶುಕ್ರವಾರ ಬಿಡುಗಡೆ ಮಾಡಲಾಗಿದೆ ಎಂದು ಇರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಪ್ರಕಟಿಸಿದೆ.

ಪೋರ್ಚುಗೀಸ್ ಧ್ವಜವಿರುವ ‘ಎಂಎನ್‌ಸಿ ಏರೀಸ್‌’ ಹಡಗಿನಲ್ಲಿ 17 ಭಾರತೀಯರು ಸೇರಿದಂತೆ 25 ಮಂದಿ ಇದ್ದರು. ಈ ಹಡಗನ್ನು ಇರಾನ್‌ ಅರೆಸೇನಾ ಪಡೆ ಏಪ್ರಿಲ್‌ 13ರಂದು ವಶಪಡಿಸಿಕೊಂಡಿತ್ತು. ಕೆಲವು ದಿನಗಳ ಹಿಂದಷ್ಟೇ ಇಸ್ರೇಲ್‌ ನಡೆಸಿದ ಸರಣಿ ದಾಳಿಯ ಬೆನ್ನಲ್ಲೇ ತನ್ನ ಜಲಮಾರ್ಗದ ಮೂಲಕ ಸಾಗುವ ಹಡಗುಗಳನ್ನು ಇಸ್ರೇಲ್‌ ವಶಕ್ಕೆ ಪಡೆದಿತ್ತು. ಹಡಗಿನಲ್ಲಿದ್ದ ಭಾರತೀಯರ ಪೈಕಿ ಏಕೈಕ ಮಹಿಳೆ ಅ್ಯನ್‌ ಟೆಸ್ಸಾ ಜೋಸೆಫ್‌ ಅವರನ್ನು ಏಪ್ರಿಲ್‌ 18ರಂದು ಬಿಡುಗಡೆ ಮಾಡಲಾಗಿತ್ತು. ಟೆಹ್ರಾನ್‌ನಲ್ಲಿರುವ ಭಾರತೀಯ ಆಯೋಗ ಮತ್ತು ಇರಾನ್‌ ಸರ್ಕಾರದ ನಡುವಣ ನಿರಂತರ ಮಾತುಕತೆಗಳಿಂದಾಗಿ ಜೋಸೆಫ್‌ ಬಿಡುಗಡೆ ಸಾಧ್ಯವಾಗಿತ್ತು.

ಸದ್ಯ ಐವರ ಬಿಡುಗಡೆ ಸೇರಿದಂತೆ ಒಟ್ಟು 6 ಮಂದಿ ಇರಾನ್‌ ವಶದಿಂದ ಹೊರಬಂದಿದ್ದಾರೆ. ಇನ್ನೂ 11 ಮಂದಿಯ ಬಿಡುಗಡೆಗೆ ಪ್ರಯತ್ನ ಮುಂದುವರಿದಿದೆ. ಹಡಗಿನಲ್ಲಿರುವ ಭಾರತೀಯರನ್ನು ಬಿಡುಗಡೆ ಮಾಡುವ ಸಂಬಂಧ ಆ ದೇಶದ ವಿದೇಶಾಂಗ ಸಚಿವರ ಜತೆ ಮಾತನಾಡಿದ್ದು, ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿದೆ ಎಂದು ವಿದೇಶಾಂಗ ಸಚಿವ ಎಸ್. ಜೈ ಶಂಕರ್ ಇತ್ತೀಚೆಗೆ ಹೇಳಿದ್ದರು. ಹಡಗಿನಲ್ಲಿರುವ ಸಿಬ್ಬಂದಿಯ ಯೋಗಕ್ಷೇಮ ಮತ್ತು ಹಡಗನ್ನು ಮರಳಿ ಪಡೆಯುವ ಕುರಿತಂತೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ಮೆಡಿಟರೇನಿಯನ್ ಶಿಪ್ಪಿಂಗ್ ಕಂಪನಿ ತಿಳಿಸಿತ್ತು.

LEAVE A REPLY

Please enter your comment!
Please enter your name here