ಮಂಗಳೂರು: ‘ಬಂಟ್ಸ್ ನೌ’ ಅಂತರ್ಜಾಲ ಸುದ್ದಿ ಮಾಧ್ಯಮ ಸಂಸ್ಥೆಯ ವತಿಯಿಂದ ಅನುಬಂಧ – 2024 ಕಾರ್ಯಕ್ರಮ ಮೇ 19 ರಂದು ಮಂಗಳೂರು ಪುರಭವನದಲ್ಲಿ ಅಪರಾಹ್ನ 3 ರಿಂದ ರಾತ್ರಿ 10 ರ ತನಕ ನಡೆಯಲಿದೆ ಎಂದು ‘ಬಂಟ್ಸ್ ನೌ’ ಸ್ಥಾಪಕ ರಂಜಿತ್ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬಂಟರ ಸಂಘ ಮುಂಬಯಿ ಇದರ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಕೆ. ಅಜಿತ್ ಕುಮಾರ್ ರೈ ಮಾಲಾಡಿ, ಶ್ರೀದೇವಿ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಡಾ. ಎ. ಸದಾನಂದ ಶೆಟ್ಟಿ, ಹಿರಿಯ ಉದ್ಯಮಿ ಅರಿಯಡ್ಕ ಚಿಕ್ಕಪ್ಪನಾಯ್ಕ ಮಾಜಿ ಶಾಸಕ ಬನ್ನೂರು ಅಪ್ಪಣ್ಣ ಹೆಗ್ಡೆಯವರು ಸಾಂಕೇತಿಕವಾಗಿ ಉದ್ಘಾಟಿಸಲಿದ್ದಾರೆ. ಈ ಸಂಭ್ರಮದಲ್ಲಿ ಗೌರವ ಅತಿಥಿಗಳಾಗಿ ಜಸ್ಟಿಸ್ ಸಂತೋಷ್ ಹೆಗ್ಡೆ, ಡಾ.ಎಚ್.ಎಸ್ ಬಲ್ಲಾಳ್, ಡಾ. ಎ.ಜೆ.ಶೆಟ್ಟಿ, ಕರ್ನಿರೆ ವಿಶ್ವನಾಥ್ ಶೆಟ್ಟಿ, ಇಂದ್ರಾಳಿ ಜಯಕರ ಶೆಟ್ಟಿ, ವಿಜಯ್ ಶೆಟ್ಟಿ ಕಾರ್ಕಳ, ಅಜಿತ್ ಹೆಗ್ಡೆ ಕಾನಾಡಿ, ಸುರೇಶ್ ಶೆಟ್ಟಿ ಗುರ್ಮೆ, ಗುರುರಾಜ್ ಶೆಟ್ಟಿ ಗಂಟಿಹೊಳೆ, ಕಕುಂತಳಾ ಶೆಟ್ಟಿ ಪುತ್ತೂರು, ಮಧುಕರ ಶೆಟ್ಟಿ ಬೆಂಗಳೂರು, ವಸಂತ್ ಶೆಟ್ಟಿ ಬೆಳ್ಳಾರೆ, ಹರಿಪ್ರಸಾದ್ ರೈ, ಚಂದ್ರಹಾಸ್ ಶೆಟ್ಟಿ ರಂಗೋಲಿ, ಜಗನ್ನಾಥ ಶೆಟ್ಟಿ ಬಾಳ, ರಮೇಶ್ ಶೆಟ್ಟಿ ಸಿದ್ಧಕಟ್ಟೆ, ಚೇತನ್ ಶೆಟ್ಟಿ ಬೆಳಗಾವಿ, ಗಣೇಶ್ ಶೆಟ್ಟಿ ಡೊಂಬಿವಲಿ, ಜಯರಾಮ್ ಶೆಟ್ಟಿ ಬೆಳ್ತಂಗಡಿ, ಲೋಕಯ್ಯ ಶೆಟ್ಟಿ ಮುಂಚೂರು, ಭವ್ಯ ಎ. ಶೆಟ್ಟಿ ಸುರತ್ಕಲ್ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಸಮಾರಂಭದಲ್ಲಿ ಡಾ.ಎಂ.ಮೋಹನ್ ಆಳ್ವ, ಕರುಣಾಕರ ಎಂ ಶೆಟ್ಟಿ, ಕಿಶೋರ್ ಹೆಗ್ಡೆ ಮೊಳಹಳ್ಳಿ, ಡಾ ಆರ್ ಕೆ ಶೆಟ್ಟಿ, ಮಿತ್ರಂಪಾಡಿ ಜಯರಾಮ ರೈ, ಸೀತಾರಾಮ್ ರೈ, ಪ್ರವೀಣ್ ಶೆಟ್ಟಿ ಪುತ್ತೂರು ಮತ್ತು ಕರ್ನಲ್ ಜಗಜೀವನ್ ಭಂಡಾರಿ ಇವರಿಗೆ ಬ೦ಟ ರತ್ನ -2024 ರ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು. ಅಂತೆಯೇ ರಾಜೇಂದ್ರ ವಿ. ಶೆಟ್ಟಿ, ಮುರಳಿ ಮೋಹನ್ ಶೆಟ್ಟಿ ಗೋವಾ, ರಾಕೇಶ್ ಬೆಳ್ಳಾರೆ, ಎಂ.ಬಿ. ಉಮೇಶ್ ಶೆಟ್ಟಿ, ವಿಶು ಶೆಟ್ಟಿ ಅಂಬಲಪಾಡಿ ಮತ್ತು ಪ್ರಭಾಕರ್ ವಿ.ಶೆಟ್ಟಿಯವರಿಗೆ ಬಂಟ ವಿಭೂಷಣ 2024 ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು. ಸಮಾರಂಭದಲ್ಲಿ 2024 ರ ಸಾಲಿನ ಯುವ ಬಂಟ ರತ್ನ ಪ್ರಶಸ್ತಿಯನ್ನು ಅದರ್ಶ್ ಶೆಟ್ಟಿ ಹಾಲಾಡಿ, ಮಂದರ ಶೆಟ್ಟಿ ಹೊನ್ನಾಳ, ಎಚ್. ಪ್ರಸನ್ನಚಂದ್ರ ಶೆಟ್ಟಿ, ಡಾ. ಹರ್ಷ ಕುಮಾರ್ ರೈ ಮಾಡಾವು ಇವರಿಗೆ ನೀಡಲಾಗುವುದು ಎಂದು ಹೇಳಿದ ಅವರು, ಕಾರ್ಯಕ್ರಮದಲ್ಲಿ ಮಕ್ಕಳ ಆರೋಗ್ಯ ಮತ್ತು ಜೀವನ ಶೈಲಿಯ ಬಗ್ಗೆ ಬಂಟರ ಸಂಘ ಆಂಧ್ರಪ್ರದೇಶ ಇದರ ಮಾಜಿ ಅಧ್ಯಕ್ಷ ರತ್ನಾಕರ ರೈ ದಿಕ್ಕೂಚಿ ಭಾಷಣ ನೀಡಲಿದ್ದು, ರಕ್ಷಣ್ ಶೆಟ್ಟಿ ಮಾಡೂರು ಮತ್ತು ಬಳಗದವರಿಂದ ಸಂಗೀತ ರಸಸಂಜೆ, ಧೀರಜ್ ರೈ ಸಂಪಾಜೆ, ಕಡಬ ದಿನೇಶ್ ರೈ ಸಾರಥ್ಯದಲ್ಲಿ ಯಕ್ಷಗಾನ ನಾಟ್ಯ ಹಾಸ್ಯ ವೈಭವ ಮತ್ತು ಶಾರದಾ ಆರ್ಟ್ಸ್ ತಂಡದಿಂದ ಕಲ್ಪಿಗದ ಮಾಯ್ಕಾರೆ ಪಂಜುರ್ಲಿ ತುಳು ನಾಟಕ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು. ವಿಶ್ವನಾಥ ಶೆಟ್ಟಿ, ಸುಕೇಶ್ ಭಂಡಾರಿ, ರಾಜೇಶ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.