ಮಂಗಳೂರು: ‘ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು ಸಹಯೋಗದೊಂದಿಗೆ ದ.ಕ.ಜಿಲ್ಲಾ ಬಂಟ್ವಾಳ ತಾಲೂಕು ಘಟಕದ ಆಶ್ರಯದಲ್ಲಿ ಮೇ.19ರಂದು ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ “ಪತ್ತನಾಜೆ” ಜಾನಪದ ಹಬ್ಬ ನಡೆಯಲಿದ್ದು ಪದ್ಮಶ್ರೀ ಪುರಸ್ಕೃತೆ ಡಾ.ಮಂಜಮ್ಮ ಜೋಗತಿ ಉದ್ಘಾಟಿಸಲಿದ್ದಾರೆ. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಮಹಾವಿದ್ಯಾಲಯ ಉಜಿರೆಯ ಕನ್ನಡ ಸಹಪ್ರಾಧ್ಯಾಪಕ ಡಾ.ದಿವಾ ಕೊಕ್ಕಡ ಪತ್ತನಾಜೆಯ ಬಗ್ಗೆ ವಿಶೇಷ ಉಪನ್ಯಾಸ ನೀಡುವರು. ಮೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ರಾಮ ಭಟ್ ಶುಭಾಶಂಸನೆ ಮಾಡುವರು ಎಂದು ದ.ಕ. ಜಿಲ್ಲಾ ಜಾನಪದ ಪರಿಷತ್ ಇದರ ಪ್ರಧಾನ ಕಾರ್ಯದರ್ಶಿ ರಾಜೇಶ್ ಸ್ಟೈಲಾರ್ಕ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಜಿಲ್ಲಾ ಘಟಕದ ಸೂಚನೆಯಂತೆ ಬಂಟ್ವಾಳ ತಾಲೂಕಿನಲ್ಲಿಯೂ ಚಾನಪದ ಪರಿಷತ್ತಿನ ಘಟಕ ಆಸ್ಥಿತ್ವಕ್ಕೆ ಬಂದಿದ್ದು ಈಗಾಗಲೇ ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭ ಯಶಸ್ವಿಯಾಗಿ ಸಂಪನ್ನಗೊಂಡಿದೆ. ಮುಂದಿನ ದಿನಗಳಲ್ಲಿ ಘಟಕವನ್ನು ಇಡೀ ತಾಲೂಕಿಗೆ ವಿಸ್ತರಿಸುವುದೊಂದಿಗೆ ತಾಲೂಕಿನಾದ್ಯಾಂತ ಜಾನಪದ ಪರಂಪರೆಯನ್ನು ಪ್ರತಿಬಿಂಬಿಸುವ ಕಾರ್ಯಕ್ರಮಗಳನ್ನು ಆಯೋಜಿಸುವ ಉದ್ದೇಶವಿದೆ ಎಂದು ಹೇಳಿದ ಅವರು, ತಾಲೂಕು ಘಟಕದ ಕಾರ್ಯಕ್ರಮವಾಗಿ “ಪತ್ತನಾಜೆ” ಎಂಬ ವೈಶಿಷ್ಯಪೂರ್ಣವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಪತ್ತನಾಜೆಯ ವಿಶೇಷತೆಯನ್ನು ಜನಮಾನಸಕ್ಕೆ ತಿಳಿಯಪಡಿಸುವ ಜತೆಯಲ್ಲಿ ತುಳುನಾಡಿನ ಜನಪದ ಆಹಾರ ಪದ್ಧತಿಯನ್ನು ಪರಿಚಯಿಸುವ ದೃಷ್ಟಿಯಿಂದ “ಜಾನಪದ ಆಹಾರ ಮೇಳ”, ಜಾನಪದ ಕಲೆಗಳನ್ನು ಪ್ರತಿಬಿಂಬಿಸುವ ಉದ್ದೇಶದಿಂದ “ಸಾಂಸ್ಕೃತಿಕ ಮೇಳ” ತುಳುನಾಡಿನ ಆಟಕೂಟಗಳ “ಜಾನಪದ ಕ್ರೀಡಾ ಕೂಟ” ಹಾಗೂ ಜನಪದರು ಬಳಸುತ್ತಿದ್ದ ಭೌತಿಕ ಪರಿಕರಗಳ ಪ್ರದರ್ಶನ “ಜಾನಪದ ವಸ್ತು ಪ್ರದರ್ಶನ” ವನ್ನು “ಪತ್ತನಾಜೆ” ಕಾರ್ಯಕ್ರಮದಲ್ಲಿ ಆಯೋಜಿಸಲಾಗಿದೆ. ಇದೊಂದು ವಿಭಿನ್ನವಾದ, ಅರ್ಥಪೂರ್ಣವಾದ ಹಾಗೂ ಜಾನಪದ ಸಂಸ್ಕೃತಿಯನ್ನು ಮೇಳ್ವೆಯಿಸುವ ಜಾನಪದ ಹಬ್ಬವಾಗಿ ಮೂಡಿಬರಲಿದೆ ಎಂದರು.
ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್, ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಸುಧೀರ್ ಕುಮಾರ್ ಶೆಟ್ಟಿ ಕಣ್ಣೂರು, ಶಾಸಕ ರಾಜೇಶ್ ನ್ಯಾಕ್ ಉಳಿಪ್ಪಾಡಿ, ಮಾಜಿ ಸಚಿವ ಬಿ. ರಮಾನಾಥ ರೈ, ರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಎ. ಸಿ. ಭಂಡಾರಿ, ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ. ತುಕಾರಾಂ ಪೂಜಾರಿ, ಉದ್ಯಮಿ ರಘುನಾಥ ಸೋಮಯಾಜಿ, ಸೇವಾ ಚಾರಿಟೇಬಲ್ ಟ್ರಸ್ಟ್ ಸ್ಥಾಪಕ, ಉದ್ಯಮಿ ಅರ್ಜುನ್ ಭಂಡಾರ್ ಕಾರ್, ಯಕ್ಷಧ್ರುವ ಪಟ್ಲ ಪೌಂಡೇಶನ್ ಬಂಟ್ವಾಳ ಘಟಕದ ಅಧ್ಯಕ್ಷ ಡಿ. ಚಂದ್ರಹಾಸ ಶೆಟ್ಟಿ ರಂಗೋಲಿ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಜಗನ್ನಾಥ ಚೌಟ ಬದಿಗುಡ್ಡೆ, ಲ. ಸುಧಾಕರ ಆಚಾರ್ಯ, ಮಾರ್ನಬೈಲ್ ಬಜಾರ್ ಸಮೂಹ ಸಂಸ್ಥೆಗಳು, ದ.ಕ. ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಪಮ್ಮಿ ಕೋಡಿಯಲ್ ಬೈಲ್, ಕನ್ನಡ ಸಾಹಿತ್ಯ ಪರಿಷತ್ ಬಂಟ್ವಾಳ ಅಧ್ಯಕ್ಷ ವಿಶ್ವನಾಥ ಬಂಟ್ವಾಳ, ಉದ್ಯಮಿ ಡಾ.ಹರೀಶ್ ಬೊಟ್ಟಾರಿ, ಸೈಂಟ್ ಡೊಮಿನಿಕ್ ಸ್ಕೂಲ್ ಬಡಕಬೈಲು ಪ್ರಾಂಶುಪಾಲ ಡಾ.ಅರುಣ್ ಡಿಸೋಜ, ಬಂಟ್ವಾಳ ಪುರಸಭೆ ಮಾಜಿ ಉಪಾಧ್ಯಕ್ಷ ಯಾಸ್ಮಿನ್ ಹಾಮದ್, ಸಿರಿಗುಂಡದಪಾಡಿ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ಮೋಹನ್ ಶೆಟ್ಟಿ ನಲ್ವಲ್ಲಡ್ಕ, ಮೊದಲಾದವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷೆ ಪ್ರಮಿಳ ಮಾಣೂರು, ಗೌರವ ಸಲಹೆಗಾರ ಅನಿಲ್ ಪಂಡಿತ್, ಕೋಶಾಧಿಕಾರಿ ಪ್ರತಿಭಾ ಪಿ ಶೆಟ್ಟಿ, ಮೋಹನ್‌ದಾಸ್ ರೈ, ಪ್ರಧಾನ ಸಂಚಾಲಕ ಗೋಪಾಲ ಅಂಚನ್, ಜೊತೆ ಕಾರ್ಯದರ್ಶಿ ಅಕ್ಬರ್ ಅಲಿ ಉಪಸ್ಥಿತರಿದ್ದರು.