ತಲೆನೋವು, ಟೆನ್ನನ್ ಕಡಿಮೆ ಮಾಡಿ ಫ್ರೆಶ್‌ನೆಸ್ ಬೇಕು ಅನಿಸುವ ಪ್ರತಿಯೊಬ್ಬರಿಗೂ ಚಹಾ ಅದೇನೋ ಒಂದು ರೀತಿ ಮಾತ್ರೆ ಇದ್ದಂತೆ. ಹಲವರಿಗೆ ಬೆಳಿಗ್ಗೆ ನೀರು ಕುಡಿಯುವುದಕ್ಕೂ ಮೊದಲು ಒಂದು ಕಪ್ ಚಹಾ ಬೇಕೇ ಬೇಕು. ಇನ್ನು ಕೆಲವರಿಗೆ ಅದು ಹೋಗಬೇಕಿದ್ದರೆ ಚಹಾ ಅನಿವಾರ್ಯ. ಇನ್ನು ನಿದ್ರೆ ಬಾರದಿರಲು ಚಹಾ ಕುಡಿಯುವವರ ಸಂಖ್ಯೆಗೇನು ಕಡಿಮೆಯಿಲ್ಲ. ಕೆಲವರಿಗಂತೂ ಬೆಳಿಗ್ಗೆ, ಸಂಜೆ ಟೀ ಕುಡಿಯದಿದ್ದರೆ ತಲೆನೋವೆ ಬಂದುಬಿಡುತ್ತದೆ. ಒಂದು ಗುಟುಕು ಟೀ ಕುಡಿದುಬಿಟ್ಟರೆ ಹೊಸ ಉಲ್ಲಾಸವೇ ಮೂಡುತ್ತದೆ.
ಪ್ರತಿ ವರ್ಷ ಮೇ 21 ರಂದು ಅಂತಾರಾಷ್ಟ್ರೀಯ ಚಹಾ ದಿನ ಆಚರಿಸಲಾಗುತ್ತದೆ. 2005ರಲ್ಲಿ ಮೊದಲ ಸಲ ಅಂತಾರಾಷ್ಟ್ರೀಯ ಚಹಾ ದಿನವನ್ನು ಭಾರತದಲ್ಲೇ ಸೆಲೆಬ್ರೇಟ್ ಮಾಡಲಾಗಿತ್ತು. ಕಾಲಕ್ರಮೇಣ ಈ ಚಹಾ ದಿನ ವಿಶ್ವಾದ್ಯಂತ ಆಚರಿಸುವಂತಾಯಿತು. ಚಹಾವನ್ನು ಪ್ರೀತಿಸುವ ಎಲ್ಲರಿಗೂ ಚಹಾ ದಿನದ ಶುಭಾಶಯಗಳು.