ಮಂಗಳೂರು(ಅಮೆರಿಕ): ಅಮೆರಿಕದ ವ್ಯಕ್ತಿಯೊಬ್ಬ ಇತ್ತೀಚಿಗೆ ಸರ್ಜರಿ ಮೂಲಕ ದೇಹದ ಮೇಲೆ ನಾಲ್ಕು ಮೊಲೆತೊಟ್ಟುಗಳನ್ನು ಸೇರಿಸಿಕೊಂಡ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಹ್ಯಾರಿ ಹೂಫ್ ಕ್ಲೋಪೆನ್ ಎಂಬ ವ್ಯಕ್ತಿ ಈಗ ದೇಹದಲ್ಲಿ ಒಟ್ಟು 6 ಮೊಲೆ ತೊಟ್ಟುಗಳನ್ನು ಹೊಂದಿದ್ದಾನೆ.
ಆರಂಭದಲ್ಲಿ ದೇಹ ಮಾರ್ಪಾಡು ತಜ್ಞ ಸ್ಟೀವ್ ಹಾವರ್ತ್ ಅವರಲ್ಲಿ ದೇಹದ ಮೇಲೆ ನಾಲ್ಕು ಮೊಲೆತೊಟ್ಟು ಹಾಕುವ ಸರ್ಜರಿಗೆ ಒಳಗಾಗಿದ್ದ, ಆದರೆ ಅದು ವಿಫಲವಾಗಿತ್ತು. ಬಳಿಕ ಕೊಲೊರಾಡೋ ಮೂಲದ ಟ್ಯಾಟೂ ಕಲಾವಿದ ಏಂಜೆಲ್ ಸಿಲಿಕೋನ್ ಇಂಪ್ಲಾಂಟ್ಗಳನ್ನು ನೈಸರ್ಗಿಕವಾಗಿ ಕಾಣುವ ರೀತಿಯಲ್ಲಿ ದೇಹದ ಮೇಲೆ ಮೊಲೆತೊಟ್ಟಿನಂತೆ ಹಚ್ಚೆ ಹಾಕಿದ್ದಾರೆ. ಹ್ಯಾರಿ ಹೂಫ್ ಕ್ಲೋಪೆನ್ ನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.