ಯಾವುದೇ ದಾಖಲೆ ಸಲ್ಲಿಸದಿದ್ದರೂ ಸ್ಥಿರಾಸ್ತಿಯಲ್ಲಿ ಹಕ್ಕು-ಹೈಕೋರ್ಟ್ ಆದೇಶ

ಮಂಗಳೂರು(ಬೆಂಗಳೂರು): ಒಬ್ಬ ವ್ಯಕ್ತಿಯು ಯಾವುದೇ ದಾಖಲೆ ಸಲ್ಲಿಸದಿದ್ದರೂ ಸ್ಥಿರಾಸ್ತಿಯಲ್ಲಿ ಹಕ್ಕು ಸ್ಥಾಪಿಸಬಹುದೇ..? ಎಂಬ ಪ್ರಶ್ನೆಯನ್ನು ಕರ್ನಾಟಕ ಹೈಕೋರ್ಟ್ ಬಗೆಹರಿಸಿದೆ.

ಸ್ಥಿರಾಸ್ತಿಯನ್ನು ದೀರ್ಘ ಕಾಲದಿಂದ ಸ್ವಾಧೀನ ಇಟ್ಟುಕೊಂಡಿದ್ದು, ತನ್ನ ಹೆಸರಿನಲ್ಲಿ ರೆವೆನ್ಯೂ ದಾಖಲೆಗಳನ್ನು ಒಬ್ಬ ವ್ಯಕ್ತಿ ಹೊಂದಿದ್ದರೆ ಆಗ ಆತ ಯಾವುದೇ ದಾಖಲೆಯನ್ನು ಸಲ್ಲಿಸದಿದ್ದರೂ ಆ ಸ್ಥಿರಾಸ್ತಿಯಲ್ಲಿ ಆತನಿಗೆ ಆತನ ಹಕ್ಕನ್ನು ಘೋಷಿಸಲು ಯಾವುದೇ ಅಡ್ಡಿ ಇರುವುದಿಲ್ಲ ಎಂದು ಹೈಕೋರ್ಟ್ ಮಹತ್ವದ ತೀರ್ಪಿನಲ್ಲಿ ತಿಳಿಸಿದೆ. ಕರ್ನಾಟಕ ಹೈಕೋರ್ಟ್‌ನ ನ್ಯಾ. ಶ್ರೀನಿವಾಸ್ ಹರೀಶ್ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.

 

LEAVE A REPLY

Please enter your comment!
Please enter your name here