ಧ್ವನಿ ಮತ್ತು ಬೆಳಕು ಸಾಮಾಗ್ರಿಗಳ ಮಾಲಕರ ಸಂಘದಿಂದ ವಿದ್ಯಾರ್ಥಿಗಳಿಗೆ ಪುಸ್ತಕ ಹಾಗೂ ಬ್ಯಾಗ್ ವಿತರಣೆ

ಮಂಗಳೂರು: ಧ್ವನಿ ಮತ್ತು ಬೆಳಕು ಸಾಮಾಗ್ರಿಗಳ ಮಾಲಕರ ಸಂಘದ ವತಿಯಿಂದ ನಗರದ ಕಾರ್ ಸ್ಟ್ರೀಟ್‍ನ ಬಿಈಎಮ್ ಸ್ಕೂಲ್‍ನ 6ನೇ ಹಾಗೂ 7ನೇ ತರಗತಿಯ ವಿದ್ಯಾರ್ಥಿಗಳಿಗೆ ಪುಸ್ತಕ ಹಾಗೂ ಬ್ಯಾಗ್ ವಿತರಿಸಲು ನಿರ್ಧರಿಸಿದ್ದೇವೆ ಎಂದು ಡಿಜೆ ಶ್ಯಾಮ್ ಹೇಳಿದ್ದಾರೆ.

ನಗರದ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, 2018ರಿಂದ ನಮ್ಮ ಸಂಘವು ಹಲವು ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿದ್ದು, ರಕ್ತದಾನ ಶಿಬಿರ, ಮಾಲಕರಿಗೆ ಜೀವ ವಿಮೆ, ಅಪಘಾತ ವಿಮೆ ಹಾಗೂ ಧನ ಸಹಾಯವನ್ನು ಮಾಡುತ್ತಾ ಬಂದಿದೆ. ಹಲವಾರು ಕಾರ್ಯಕ್ರಮಗಳನ್ನು ಮಾಲಕರ ಕುಟುಂಬ ಹಾಗೂ ಕಾರ್ಮಿಕರು ಜೊತೆಗೂಡಿ ಆಯೋಜಿಸಿದ್ದೇವೆ. ಜೂನ್ 15ರಂದು ನಗರದ ಕಾರ್ ಸ್ಟ್ರೀಟ್‍ನ 180 ವರ್ಷ ಹಳೆಯ ಬಿಈಎಮ್ ಸ್ಕೂಲ್‍ನ 6 ಮತ್ತು 7ನೇ ತರಗತಿಯ 180 ಮಕ್ಕಳಿಗೆ ಪುಸ್ತಕ ಹಾಗೂ ಬ್ಯಾಗ್ ವಿತರಣೆ ಮಾಡುತ್ತಿದ್ದೇವೆ ಎಂದರು.

ಸುದ್ದಿಗೋಷ್ಟಿಯಲ್ಲಿ ಮಂಗಳೂರು ಧ್ವನಿ ಮತ್ತು ಬೆಳಕು ಸಾಮಾಗ್ರಿಗಳ ಮಾಲಕರ ಸಂಘದ ವೆಂಕಟರಾಮ್ ಪೈ, ಬೆನೆಟ್ ಡಿಸಿಲ್ವಾ, ನಿತ್ಯಾನಂದ, ಮಹೇಶ್ ಬೋಳಾರ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here