ವಿಸ್ಮಯಗಳು ಅಂದ್ರೆ ಯಾರಿಗೆ ತಾನೆ ಇಷ್ವವಾಗಲ್ಲ. ಭೂಮಿ ಮೇಲೆ ವಿಜ್ಞಾನದ ವಿಸ್ಮಯಗಳು ನಮ್ಮ ಸುತ್ತಮುತ್ತಲು ಆಗಾಗ ನಡೆಯುತ್ತಿರುತ್ತದೆ. ಆದರೆ ಈ ವಿಸ್ಮಯಗಳನ್ನು ಸೂಕ್ಷ್ಮವಾಗಿ ಗುರುತಿಸುವ ಕೆಲಸ ನಾವು ಮಾಡಬೇಕಿದೆ.
ಕೇವಲ ಕಪಾಳಕ್ಕೆ ಜೋರಾಗಿ ಹೊಡೆದ್ರೆ ಮನುಷ್ಯ ಬದುಕೋದಿಲ್ಲ. ಅಂತಹದ್ದರಲ್ಲಿ ಹುಂಜವೊಂದರ ಕತ್ತನ್ನು ಕತ್ತರಿಸಿದರೂ 2 ವರ್ಷಗಳ ಕಾಲ ಬದುಕಿತ್ತು ಎನ್ನುವುದು ಸದ್ಯದ ವಿಸ್ಮಯಗಳಲ್ಲೊಂದು. ಈಗ ಸಾಮಾಜಿಕ ತಾಣಗಳಲ್ಲಿ ಇದೇ ಸುದ್ದಿ ಹೆಚ್ಚು ಓಡಾಡುತ್ತಿದ್ದು, “ಮೈಕ್ ದಿ ಹೆಡ್‌ಲೆಸ್ ಚಿಕನ್” ಎಂದೇ ಪ್ರಖ್ಯಾತಿ. ಕತ್ತು ಕತ್ತರಿಸಿದರೂ 2 ವರ್ಷಗಳ ಕಾಲ ಬದುಕಿದ್ದ ಹುಂಜದ ಬಗೆಗಿನ ಮಾಹಿತಿ ಇಲ್ಲಿದೆ.
ಅಮೆರಿಕದ ಕೊಲೊರಾಡೊದಲ್ಲಿ ರೈತ ‘ಲಾಯ್ಡ್ ಓಲ್ಸೆನ್’ ಎಂಬುವವರು ತನ್ನ ಅತ್ತೆಗೆ ಕೋಳಿ ಸಾರು ಮಾಡಲೆಂದು ಕಾಕ್‌ಕೆರಲ್ ಹೆಸರಿನ ಮೈಕ್ ಕೋಳಿಯನ್ನು ಹಿಡಿದು ಅದರ ತಲೆ ಕತ್ತರಿಸಿದರು. ಆದರೆ ಕೋಳಿ ತಲೆ ಕತ್ತರಿಸಿದಾಗ ಮೆದುಳಿಗೆ ಸಂಪರ್ಕಿಸುವ ‘ಜುಗುಲಾರ್ ನರ’ ತಪ್ಪಿಸಿಕೊಂಡಿದ್ದು, ತುಂಡಾಗಿರಲಿಲ್ಲ. ಜುಗುಲಾರ್ ನರ ತುಂಡಾಗದೆ ಇದ್ದ ಕಾರಣದಿಂದ ಬದುಕುಳಿದ ‘ಮೈಕ್’ ಹುಂಜವು 18 ತಿಂಗಳು ಕಾಲ ಬದುಕಿತ್ತು. ಕತ್ತು ಕತ್ತರಿಸಿದರೂ ಬದುಕಿದ್ದನ್ನು ನೋಡಿದ ರೈತ ‘ಲಾಯ್ಡ್ ಓಲ್ಸೆನ್’ ಹುಂಜವನ್ನು ಬದುಕುಳಿಯಲು ಬಿಟ್ಟು, ಅದಕ್ಕೆ ‘ಮೈಕ್’ ಎಂದು ಹೆಸರಿಟ್ಟ. ಅಂದಿನಿಂದ ತಲೆ ಇಲ್ಲದ ‘ಮೈಕ್’ ಹುಂಜ ವಿದೇಶ ಪ್ರಯಾಣ ಮಾಡಲು ಪ್ರಾರಂಭಿಸಿತು. ಮೈಕ್ ಹುಂಜ ಹೆಚ್ಚು ಪ್ರಚಾರ ಪಡೆದು ಪ್ರಖ್ಯಾತ ಟೈಮ್ ಮತ್ತು ಲೈಫ್ ನಿಯತಕಾಲಿಕೆಗಳಲ್ಲಿಯೂ ಮಿಂಚಿತು.
ಮೈಕ್ ಹುಂಜದ ಖ್ಯಾತಿ ಹೆಚ್ಚಾಗಿದ್ದನ್ನು ಬಳಸಿಕೊಂಡ ರೈತ ‘ಲಾಯ್ಡ್ ಓಲ್ಸೆನ್’ ಅದರ ಪ್ರದರ್ಶನಕ್ಕೆ ಶುಲ್ಕ ನಿಗದಿ ಪಡಿಸಿ ತಿಂಗಳಿಗೆ ಸುಮಾರು 17 ಲಕ್ಷ ( $25 ಸಾವಿರ ಡಾಲರ್ ) ಸಂಪಾದನೆ ಮಾಡುತ್ತಿದ್ದ. ‘ಅತಿ ಆಸೆ ಗತಿ ಗೇಡು’ ಎಂದ ಹಾಗೆ ‘ಮೈಕ್’ ಹುಂಜ ಕತ್ತಿಲ್ಲದಿದ್ದರೂ ಬದುಕಿದ್ದನ್ನೂ ನೋಡಿದ ಇತರರು ಹಣ ಸಂಪಾದಿಸುವ ಉದ್ದೇಶದಿಂದ ತಾವು ಸಾಕಿದ ಕೋಳಿಗಳ ತಲೆ ಕತ್ತರಿಸಲು ಪ್ರಾರಂಭಿಸಿದ್ದರು. ಆದರೆ ಬದುಕುಳಿಯಲಿಲ್ಲ. ಮೈಕ್ ಹುಂಜ ಏಪ್ರಿಲ್ 1945 ರಲ್ಲಿ ಜನಿಸಿ ಮಾರ್ಚ್ 1947 ರಲ್ಲಿ ಮರಣ ಹೊಂದಿತು. ಮೈಕ್‌ಗೆ ‘ಐಡ್ರಾಪರ್ ಬಳಸಿ ನೀರು ಮತ್ತು ಆಹಾರ ನೀಡಲಾಗುತ್ತಿತಂತೆ. ಲಾಯ್ಡ್ ಓಲ್ಸೆನ್ ಕ್ಯಾಲಿಫೋರ್ನಿಯಾ ಮತ್ತು ಅರಿಜೊನಾಗೆ ಪ್ರವಾಸ ಹೋಗಿದ್ದಾಗ ಅರಿಜೊನಾದಲ್ಲಿ ‘ಮೈಕ್’ ಗೆ ಆಹಾರ ಕೊಡುವುದನ್ನು ಮರೆತದ್ದರಿಂದ ಮೈಕ್ ಸಾವನ್ನಪ್ಪಿತು.
ತಲೆಯಿಲ್ಲದಿದ್ದರೂ ಬದುಕಿದ ‘ಮೈಕ್’ ನೆನಪಿಗಾಗಿ ಪ್ರತಿ ವರ್ಷ ‘ಮೇ’ ತಿಂಗಳಲ್ಲಿ ‘ಮೈಕ್ ದಿ ಹೆಡ್‌ಲೆಸ್ ಚಿಕನ್ ಡೇ’ ಎಂದು ಆಚರಿಸಲಾಗುತ್ತದೆ. ಅಲ್ಲದೇ ಸಾಮಾಜಿಕ ತಾಣ ಫೇಸ್‌ಬುಕ್‌ನಲ್ಲೂ ಪಬ್ಲಿಕ್ ಫಿಗರ್ ಆದ ‘ಮೈಕ್’ ತನ್ನ ಅಧಿಕೃತ ಪೇಜ್ ಹೊಂದಿದ್ದು 16,611 ಜನರು ಪೇಜ್ ಲೈಕ್ ಮಾಡಿದ್ದಾರೆ.
“ಹುಂಜನ ತಲೆ ಕತ್ತರಿಸಿದಾಗ ಮೊದಲೇ ಹೇಳಿದಂತೆ ಮೆದುಳಿಗೆ ಸಂಪರ್ಕಿಸುವ ‘ತಲೆಯಿಂದ ರಕ್ತವನ್ನೊಯ್ಯುವ’ ನರ ತಪ್ಪಿಸಿಕೊಂಡಿತ್ತು. ಮೆದುಳಿನಿಂದ ಇನ್‌ಪುಟ್ ಬರದಿದ್ದರು ಸಹ ನರತಂತುಗಳು ಸಕ್ರಿಯವಾಗಿ ಇರಬಲ್ಲವು, ಕಾಲುಗಳು ಚಲಿಸಬಲ್ಲವು” ಎಂದು ನ್ಯೂಕ್ಯಾಸಲ್ ವಿಶ್ವವಿದ್ಯಾಲಯದ ‘ಡಾ . ಟಾಮ್ ಸ್ಮುಲ್ಡರ್ಸ್’ ಹೇಳಿದ್ದರು.
ವೀಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ