ಮಂಗಳೂರು: ಶಾಸಕ ಹರೀಶ್ ಪೂಂಜಾ ಅವರಿಗೆ ನಿನ್ನೆ ಹೈಕೋರ್ಟ್ ಏನು ಹೇಳಿದೆ ಎಂದು ಎಲ್ಲರಿಗೂ ಗೊತ್ತಿದೆ. ಶಾಸಕರಾದವರು ಮುಂದಿನ ಪೀಳಿಗೆಗೆ ಮಾದರಿಯಾಗಬೇಕಿತ್ತು. ಹೈಕೋರ್ಟ್ ಇದನ್ನು ಸ್ಪಷ್ಟವಾಗಿ ಉಲ್ಲೇಖಿಸಿದೆ ಎಂದು ಕೆ.ಪಿ.ಸಿ.ಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ ಹೇಳಿದ್ದಾರೆ.
ಮಂಗಳೂರಿನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾ ಕೇಸ್ ವಿಚಾರಕ್ಕೆ ಸಂಬಂಧ ಪಟ್ಟಂತೆ ಮಾತನಾಡಿದ ಅವರು, ಹರೀಶ್ ಪೂಂಜಾ ಅವರನ್ನು ಅವತ್ತೇ ಬಂಧನ ಮಾಡಬೇಕಿತ್ತು. ಬಂಧನ ಮಾಡದೇ ಇದ್ರೆ ಮುಂದಿನ ದಿನ ಇದು ಹಳಿ ತಪ್ಪುತ್ತೆ, ಪೊಲೀಸರು ಅಂದು ಮೃದು ಧೋರಣೆ ತೋರಿದ್ದರು, ಈ ಬಗ್ಗೆ ಗೃಹ ಮಂತ್ರಿಗಳ ಗಮನಕ್ಕೂ ತರಲಾಗಿದೆ. ರಾಜಕಾರಣಿಗಳೇ ಕಾನೂನಿಗೆ ಗೌರವ ನೀಡದಿದ್ರೆ ನಾವು ಜನರಿಂದ ಏನು ನಿರೀಕ್ಷೆ ಮಾಡಬಹುದು. ಅವತ್ತು ಪೊಲೀಸರು ಮೃದು ಧೋರಣೆ ತೋರಬಾರದಿತ್ತು. ಕಾನೂನಿಗಿಂತ ಯಾರು ಸಹ ದೊಡ್ಡವರಲ್ಲ. ಹರೀಶ್ ಪೂಂಜಾ ಮಾತನಾಡಿರುವ ಮಾತು ಎಂತವರನ್ನು ಕೆರಳಿಸುತ್ತೆ. ಒಂದು ಸಲ ಯೋಚನೆಯನ್ನು ಮಾಡಿಸುತ್ತೆ. ಜನಪ್ರತಿನಿಧಿಯಾದಂತವರು ಪೊಲೀಸರ ಕಾಲರ್ ಏಳಿತೇವೆ ಎಂಬ ಮಟ್ಟಕ್ಕೆ ಹೋದ್ರೆ ಪೊಲೀಸರ ಕೈಯಲ್ಲಿ ಬೇಡಿ ಇರಲ್ವಾ. ಇವರ ಕೈಯಲ್ಲಿ ಕಾಲರ್ ಬಂದಾಗ ಅವರ ಕೈಯಲ್ಲಿ ಬೇಡಿ ಇರಲ್ವಾ, ಮಾತನಾಡುವಾಗ ಯೋಚನೆ ಮಾಡಿ ಮಾತನಾಡಬೇಕಿತ್ತು ಎಂದು ಹೇಳಿದ್ದಾರೆ.
ಮಂಗಳೂರು ರಸ್ತೆಯಲ್ಲೇ ನಮಾಝ್ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ಪೊಲೀಸರು ತರಾತುರಿ ಮಾಡಿದ್ದಾರೆ. ಮಸೀದಿಯವರು ಮುಚ್ಚಳಿಕೆ ಬರೆದು ಕೊಟ್ಟಿದ್ರು,ಸುಮೋಟೊ ಕೇಸ್ ಬಗ್ಗೆ ಆ ಸಂದರ್ಭ ಹೇಳಿರಲಿಲ್ಲ. ಯಾವ ಆಧಾರದಲ್ಲಿ ಸುಮೋಟೊ ಕೇಸ್ ಹಾಕಿದ್ದಾರೆ ಎಂದು ಮಸೀದಿಯವರಿಗೆ ಗೊತ್ತಿರಲಿಲ್ಲ. ನಮ್ಮ ಗಮನಕ್ಕೆ ಬಂದಾಗ ಸಂಬಂದ ಪಟ್ಟ ಅಧಿಕಾರಿಗಳ ಜೊತೆ ಮಾತನಾಡಿದ್ದೇವೆ. ಯಾರು ಮಾಡಿದ್ದಾರೆ, ಏನು ಮಾಡಿದ್ದಾರೆ ಎಂಬ ಪೂರ್ಣ ಮಾಹಿತಿ ಪೊಲೀಸರ ಬಳಿ ಇರಲಿಲ್ಲ. ಬಿ ಫಾರಂ ತೆಗಿತಾ ಇದ್ದೇವೆ, ಮುನ್ನೆಚ್ಚರಿಕೆ ಕ್ರಮವಾಗಿ ಕೇಸ್ ಮಾಡಲಾಗಿತ್ತು ಎಂದು ಪೊಲೀಸರು ಹೇಳಿದ್ರು. ಈ ರೀತಿ ಮಾಡೋದು ಸರಿಯಲ್ಲವೆಂದು ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಮಾತನಾಡಿದ್ದೇವೆ. ಈ ಬಗ್ಗೆ ಗೃಹಮಂತ್ರಿ, ಮುಖ್ಯಮಂತ್ರಿಗಳ ಜೊತೆಯೂ ಮಾತನಾಡಿದ್ದೇವೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇದು ಮರುಕಳಿಸಬಾರದೆಂದು ಕೇಳಿಕೊಂಡಿದ್ದೇವೆ ಎಂದು ಹೇಳಿದ್ದಾರೆ.