ಟೇಕಾಫ್ ಆಗುತ್ತಿದ್ದಂತೆಯೇ ವಿಮಾನದಲ್ಲಿ ಕಾಣಿಸಿಕೊಂಡ ಬೆಂಕಿ-ವಿಡಿಯೋ ವೈರಲ್

ಮಂಗಳೂರು(ಕೆನಡಾ): 389 ಪ್ರಯಾಣಿಕರು ಮತ್ತು 13 ಸಿಬ್ಬಂದಿಗಳೊಂದಿಗೆ ಪ್ಯಾರಿಸ್‌ಗೆ ತೆರಳುತ್ತಿದ್ದ ಕೆನಡಾದ ವಿಮಾನವೊಂದು ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ಬೆಂಕಿ ಹೊತ್ತಿಕೊಂಡ ಘಟನೆ ಜೂನ್ 5ರಂದು ನಡೆದಿದ್ದು, ತಡವಾಗಿ ವರದಿಯಾಗಿದೆ. ಬೆಂಕಿ ಹೊತ್ತಿಕೊಂಡ ದೃಶ್ಯವು ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗಿದೆ. ಏರ್ ಕೆನಡಾ ಸಂಸ್ಥೆಗೆ ಸೇರಿದ AC872 ವಿಮಾನವು ಜೂನ್ 5 ರಂದು ಟೊರೊಂಟೋದಿಂದ ಪ್ಯಾರಿಸ್‌ಗೆ ಹೊರಟಿತ್ತು. ಇದು ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ಇಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಕಾಣಿಸಿಕೊಂಡ ಕೂಡಲೇ ಏರ್ ಕಂಟ್ರೋಲ್ ಅಧಿಕಾರಿಯು ಪೈಲಟ್‌ಗಳಿಗೆ ಮಾಹಿತಿ ನೀಡಿದ್ದರಿಂದ ಅರ್ಧಗಂಟೆಯ ಬಳಿಕ ಮತ್ತೆ ಟೊರೊಂಟೊಗೆ ಮರಳಿ, ಸುರಕ್ಷಿತವಾಗಿ ಲ್ಯಾಂಡ್ ಆಗಿದೆ. ಪ್ರಯಾಣಿಕರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ವರದಿಯಾಗಿದೆ.

ನಮ್ಮ ಪೈಲಟ್‌ಗಳು ಹೆಚ್ಚು ನುರಿತ ವೃತ್ತಿಪರರು. ಇಂತಹ ಘಟನೆಗಳ ಸಂದರ್ಭದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಮಾಡುವ ಬಗ್ಗೆ ಚೆನ್ನಾಗಿ ತರಬೇತಿ ಪಡೆದಿದ್ದಾರೆ. ಕೇವಲ ಇಂಜಿನ್ ಮಾತ್ರವಲ್ಲದೇ, ವಿವಿಧ ಅಂಶಗಳಿಂದ ಕೂಡ ಇಂತಹ ಘಟನೆಗಳು ಉಂಟಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here