ಕಾಮವಾಂಛೆ ಕುರುಡು – 16 ರ ಬಾಲಕನೊಂದಿಗೆ 28 ರ ವಿವಾಹಿತ ಮಹಿಳೆ ಎಸ್ಕೇಪ್

ಮಂಗಳೂರು/ವಿಜಯಪುರ: 16 ವರ್ಷದ ಅಪ್ರಾಪ್ತ ಬಾಲಕನೊಂದಿಗೆ 4 ವರ್ಷದ ಮಗುವಿರುವ 28 ವರ್ಷದ ವಿವಾಹಿತ ಮಹಿಳೆ ಎಸ್ಕೇಪ್ ಆದ ಅಚ್ಚರಿಯ ಘಟನೆಯೊಂದು ವಿಜಯಪುರ ಜಿಲ್ಲೆಯ ಪಟ್ಟಣವೊಂದರಲ್ಲಿ ಬೆಳಕಿಗೆ ಬಂದಿದೆ. 

ಆಂಟಿಗೆ 16ರ ಅಪ್ರಾಪ್ತ ಬಾಲಕನ ಜೊತೆಗೆ ಪ್ರೇಮಾಂಕುರವಾಗಿದ್ದು, ಸದ್ಯ ಇಬ್ಬರು ಕಾಲ್ಕಿತ್ತಿದ್ದಾರೆ. ಇದರಿಂದ ಅಪ್ರಾಪ್ತ ಬಾಲಕನ ಕುಟುಂಬಸ್ಥರಲ್ಲಿ ಆತಂಕ ಮನೆಮಾಡಿದೆ. ಈ ಘಟನೆ ಬೆಳಕಿಗೆ ಬಂದಂತೆ ಬಾಲಕನ ತಾಯಿ ವಿವಾಹಿತ ಮಹಿಳೆ ನನ್ನ ಮಗನನ್ನು ಅಪಹರಿಸಿಕೊಂಡು ಹೋಗಿದ್ದಾಳೆ ಎಂದು ಆರೋಪಿಸಿದ್ದಾಳೆ. ಖಾಸಗಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವಾಗ ಇಬ್ಬರ ಮಧ್ಯೆ ಲವ್ ಆಗಿದೆ. ಮಗನನ್ನು ಪುಸಲಾಯಿಸಿಕೊಂಡು ಎಸ್ಕೇಪ್ ಆಗಿದ್ದಾಳೆ ಅಂತ ಬಾಲಕನ ತಾಯಿ ಆರೋಪಿಸಿದ್ದಾರೆ. ಈ ಹಿಂದೆ ಕೂಡ ಇದೇ ಮಹಿಳೆಗಾಗಿ ಬಾಲಕ ವಿಷ ಸೇವಿಸಿದ್ದನಂತೆ. ಮೇ.13ರಂದು ಬಸವನಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಅಪಹರಣ ಕೇಸ್ ದಾಖಲಾಗಿದೆ. ಆದರೆ ಈವರೆಗೂ ಬಾಲಕನ ಪತ್ತೆಯಾಗಿಲ್ಲ. 

LEAVE A REPLY

Please enter your comment!
Please enter your name here