ಮಂಗಳೂರು/ದೆಹಲಿ: ಮೋದಿ ಸರ್ಕಾರದಲ್ಲಿ ಹೊಸದಾಗಿ ಪ್ರಮಾಣ ವಚನ ಸ್ವೀಕರಿಸಿದ ಕೇಂದ್ರ ಸಚಿವೆ ಸಾವಿತ್ರಿ ಠಾಕೂರ್ ಅವರು ‘ಬೇಟಿ ಬಚಾವೋ ಬೇಟಿ ಪಡಾವೋ’ ಘೋಷಣೆಯನ್ನು ದೇವನಾಗರಿ ಲಿಪಿಯಲ್ಲಿ ತಪ್ಪಾಗಿ ಬರೆದಿರುವ ವಿಡಿಯೋ ವೈರಲ್ ಆಗಿದೆ.
ಜಾರ್ಖಂಡ್‌ನಲ್ಲಿ ‘ಸ್ಕೂಲ್ ಚಲೇ ಹಮ್ ಅಭಿಯಾನ್’ ಅಡಿಯಲ್ಲಿ ಶಾಲೆಗಳ ಹೊಸ ಶೈಕ್ಷಣಿಕ ಸಮಾವೇಶವನ್ನು ರಾಜ್ಯಾದ್ಯಂತ ಪ್ರಾರಂಭಿಸಲಾಗುತ್ತಿದೆ. ಅದರ ಅಂಗವಾಗಿ ಮಂಗಳವಾರ ಬುಡಕಟ್ಟು ಪ್ರಾಬಲ್ಯದ ಧಾರ್ ಜಿಲ್ಲೆಯಲ್ಲಿ ಸ್ಥಳೀಯ ಎನ್‌ಜಿಒ ಕಾರ್ಯಕ್ರಮ ಆಯೋಜಿಸಿದ್ದತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆಯ ರಾಜ್ಯ ಸಚಿವೆ ಸಾವಿತ್ರಿ ಠಾಕೂರ್, ಮೋದಿ ಸರ್ಕಾರದ ‘ಬೇಟಿ ಬಚಾವೋ ಬೇಟಿ ಪಡಾವೋ’ ಘೋಷಣೆಯನ್ನು ತಪ್ಪಾಗಿ ಬರೆದಿದ್ದು, ಅದರ ವಿಡಿಯೋ ವೈರಲ್ ಆಗಿದೆ.12ನೇ ತರಗತಿವರೆಗೆ ಶಿಕ್ಷಣ ಪಡೆದಿರುವ ಠಾಕೂರ್ ಜಾರ್ಖಂಡ್‌ನ ಧಾರ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಎರಡನೇ ಬಾರಿಗೆ ಸಂಸದರಾಗಿ, ಈಗ ಸಚಿವರೂ ಆಗಿರುವ ಅವರು ‘ಬೇಟಿ ಬಚಾವೋ ಬೇಟಿ ಪಡಾವೋ’ ಎಂಬುದನ್ನು ‘ಬೇಟಿ ಪಢಾವೋ ಬಚ್ಚಾವ್’ ಎಂದು ಬರೆದಿದ್ದಾರೆ.
ये कैसा नेतृत्व …?? क्या प्रधानमंत्री @narendramodi जी को अपनी सरकार में सिर्फ #Rubber_Stamp मंत्री ही चाहिए?
जनप्रतिनिधि कैसा होना चाहिए इसका कोई मापदंड तो तय नहीं है, पर कम से कम उसे अक्षरज्ञान तो होना ही चाहिए!#धार की #सांसद और केंद्रीय मंत्रिमंडल में महिला एवं बाल विकास… pic.twitter.com/n3TIx0RYs3
— Umang Singhar (@UmangSinghar) June 19, 2024