ಪೆರಿಯಡ್ಕದಿಂದ ಕಾಲ್ನಡಿಗೆಯಲ್ಲಿ ಸಾಗಿ ಹಜ್‌ ನಿರ್ವಹಿಸಿ ತಾಯ್ನಾಡಿಗೆ ಮರಳಿದ ನೌಷಾದ್‌ ಗೆ ಭವ್ಯ ಸ್ವಾಗತ

ಮಂಗಳೂರು/ಪುತ್ತೂರು: ಕಾಲ್ನಡಿಗೆಯ ಮೂಲಕ ಉಪ್ಪಿನಂಗಡಿ ಸಮೀಪದ ಪೆರಿಯಡ್ಕದಿಂದ ಸೌದಿ ಅರೇಭಿಯಾದ ಮೆಕ್ಕಾಗೆ ಸಾಗಿ ಹಜ್‌ ಕರ್ಮ ನಿರ್ವಹಿಸಿದ ನೌಷಾದ್‌ ತಾಯ್ನಾಡಿಗೆ ಮರಳಿದ್ದಾರೆ.

8130 ಕಿ.ಮೀ ನಷ್ಟು ದೂರವನ್ನು ಒಂದು ವರ್ಷದ ಅವಧಿಯಲ್ಲಿ ಕಾಲ್ನಡಿಗೆಯಲ್ಲಿ ಕ್ರಮಿಸಿದ್ದು, ನೌಷಾದ್‌ ಕಳೆದ ನಾಲ್ಕು ತಿಂಗಳ ಹಿಂದೆ ಸೌದಿ ಅರೇಬಿಯಾ ತಲುಪಿದ್ದರು. ನಾಲ್ಕು ತಿಂಗಳು ಅಲ್ಲಿಯೇ ಉಳಿದು ಜೂ.16ರಂದು ಕೊನೆಯ ಹಜ್‌ ಕರ್ಮಗಳನ್ನು ನಿರ್ವಹಿಸಿ ಜೂ.19ರಂದು ತಾಯ್ನಾಡಿಗೆ ಮರಳಿದ್ದಾರೆ. ಇಂದು ಮಂಗಳೂರು ವಿಮಾನ ನಿಲ್ದಾಣದಲ್ಲಿ ನೌಷಾದ್‌ ಅವರನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಪೆರಿಯಡ್ಕ ಜುಮ್ಮಾ ಮಸೀದಿ ಆಡಳಿತ ಸಮಿತಿ ಸದಸ್ಯರು ಸೇರಿದಂತೆ, ಇತರೆ ಗಣ್ಯರು ನೌಷಾದ್‌ ಅವರನ್ನು ಸ್ವಾಗತಿಸಿದರು.

LEAVE A REPLY

Please enter your comment!
Please enter your name here