ಮಂಗಳೂರು: 2023 ರ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಪ್ರಯುಕ್ತ ಅಂತರಾಜ್ಯ ಗಡಿ ಭಾಗವಾದ ತಲಪಾಡಿ ಟೋಲ್ ಗೇಟ್ ಬಳಿ ಸ್ಥಾಪಿಸಿರುವ ಚುನಾವಣಾ ವಿಚಕ್ಷಣ ದಳದ ಪಕ್ಕ ಪೋಲಿಸ್ ಚೆಕ್ ಪೋಸ್ಟ್ ಮುಂಬಾಗದಲ್ಲಿ ದಿನಾಂಕ 19/4/2023 ರಂದು ಅಬಕಾರಿ ಉಪನಿರೀಕ್ಷಕರಾದ ಉಮೇಶ್ ಹೆಚ್ ಅವರು ಸಿಬ್ಬಂದಿಗಳೊಂದಿಗೆ ರಸ್ತೆ ಗಾವಲು ನಡೆಸುತ್ತಿದ್ದಾಗ ಮುಂಜಾನೆ 3.30 ಗಂಟೆಗೆ ಕೇರಳ ಕಡೆಯಿಂದ ದ್ವಿಚಕ್ರ ವಾಹನವೊಂದನ್ನು ತಡೆದು ನಿಲ್ಲಿಸಿ ಪರಿಶೀಲಿಸಿದಾಗ ಮಾದಕ ವಸ್ತು ಸಿಕ್ಕಿದ್ದು ಆರೋಪಿ ವಾಹನ ಸವಾರ ಮಂಗಳೂರಿನ ಬಂದರು ನಿವಾಸಿ ರಾಹುಲ್ ವಲ್ಸ ರಾಜ್ ಗಾಂಜಾ ಸೇವನೆ ಮಾಡಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ಖಚಿತವಾಗಿತ್ತು. ಆರೋಪಿಯ ವಿರುದ್ಧ ಅಬಕಾರಿ ಅಧಿಕಾರಿಗಳು ದೂರು ದಾಖಲಿಸಿ ತನಿಖೆ ನಡೆಸಿ ಅಬಕಾರಿ ನಿರೀಕ್ಷಕ ಆಶೀಶ್ ಯನ್ ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಮಂಗಳೂರಿನ ಆರನೇ ಜೆ ಎಂ ಎಫ್ ಸಿ ನ್ಯಾಯಾಲಯದ ನ್ಯಾಯಾಧೀಶೆ ಪೂಜಶ್ರೀ ಆರೋಪಿಯ ವಿರುದ್ಧ ಹೊರಿಸಿದ ಆರೋಪವೂ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗೆ ಐದು ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.ದಂಡ ತೆರಲು ತಪ್ಪಿದಲ್ಲಿ ಒಂದು ತಿಂಗಳ ಜೈಲು ವಾಸ ಅನುಭವಿಸುವಂತೆ ತೀರ್ಪು ನೀಡಿದ್ದಾರೆ.ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕ ಜನಾರ್ದನ್ ವಾದಿಸಿದ್ದಾರೆ.