ವೆಸ್ಪಾ 946 ಡ್ರ್ಯಾಗನ್ ಸ್ಕೂಟರ್ ಮಾರುಕಟ್ಟೆಗೆ – ಬೆಲೆ ಗೊತ್ತಾ?

ಮಂಗಳೂರು (ಮುಂಬೈ): ಜನಪ್ರಿಯ ಇಟಾಲಿಯನ್​ ವಾಹನ ತಯಾರಕ ಪಿಯಾಜಿಯೊ ಕಂಪನಿಯ ವೆಸ್ಪಾ ಸ್ಕೂಟರ್​ ಬಗ್ಗೆ ತಿಳಿಯದವರು ಬಹಳ ಕಡಿಮೆ. ಈ ಕಂಪನಿ ಭಾರತದಲ್ಲಿ ವೆಸ್ಪಾ 946 ನೂತನ ಡ್ರ್ಯಾಗನ್ ಸ್ಕೂಟರ್​ ನ್ನು ಪರಿಚಯಿಸಿದೆ. ಅಚ್ಚರಿ ಎಂದರೆ ಈ ಸ್ಕೂಟರ್​ ಬೆಲೆ ಕೇಳಿದ್ರೆ ನೀವು ಬೆಚ್ಚಿ ಬೀಳುತ್ತೀರಿ.

ವೆಸ್ಪಾ 946 ಡ್ರ್ಯಾಗನ್ ಸೀಮಿತ ಆವೃತ್ತಿಯ ಸ್ಕೂಟರ್​ ಈಗ ಭಾರತದಲ್ಲಿ ಬಿಡುಗಡೆಗೊಂಡಿದೆ. ಭಾರತೀಯ ವಾಹನ ಪ್ರಿಯರಿಗಾಗಿ ಪರಿಚಯಿಸಿದ ಈ ಸ್ಕೂಟರ್​ ಬೆಲೆ ಬರೋಬ್ಬರಿ 14.28 ಲಕ್ಷ ರೂಪಾಯಿ. ಮೋಟೋಪ್ಲೆಕ್ಸ್​ ಶೋರೂಂಗಳಲ್ಲಿ ಈ ನೂತನ ಸ್ಕೂಟರನ್ನು ಬುಕ್​ ಮಾಡಿ ಖರೀದಿಸಬಹುದಾಗಿದೆ.
ಹೊಸ ವೆಸ್ಪಾ 946 ಡ್ರ್ಯಾಗನ್ ಸ್ಕೂಟರ್​ 150cc ait-ಕೂಲ್ಡ್ ಎಂಜಿನ್ ಹೊಂದಿದ್ದು, ನಾಲ್ಕು ವಾಲ್ವ್‌ಗಳನ್ನು ಹೊಂದಿದೆ. ಈ ಎಂಜಿನ್ ಸಂರಚನೆಯು 10.3Nm ಟಾರ್ಕ್ ಜೊತೆಗೆ 11.1bhp ನ ಗರಿಷ್ಠ ಶಕ್ತಿಯನ್ನು ಉತ್ಪಾದಿಸುತ್ತದೆ. 12-ಇಂಚಿನ ಚಕ್ರಗಳನ್ನು ಹೊಂದಿರುವ ವೆಸ್ಪಾ ನೂತನ ಸ್ಕೂಟರ್​, 220mm ಫ್ರಂಟ್ ಡಿಸ್ಕ್ ಬ್ರೇಕ್ ಮತ್ತು ಡ್ಯುಯಲ್-ಚಾನೆಲ್ ABS ನೀಡಲಾಗಿದೆ. ಜೊತೆಗೆ ಸ್ಕೂಟರ್​ನಲ್ಲಿ ಎಲ್ಇಡಿ ದೀಪ, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಎಳೆತ ನಿಯಂತ್ರಣದಂತಹ ಆಧುನಿಕ ವೈಶಿಷ್ಟ್ಯಗಳನ್ನು ನೀಡಲಾಗಿದೆ.

LEAVE A REPLY

Please enter your comment!
Please enter your name here